ಅಂಜುಮ್, ಮೆಹುಲಿಗೆ ಚಿನ್ನ

Update: 2018-11-20 18:15 GMT

ಹೊಸದಿಲ್ಲಿ, ನ.20: ಅಂಜುಮ್ ವೌದ್ಗಿಲ್ ಹಾಗೂ ಮೆಹುಲಿ ಘೋಷ್ ತಿರುವನಂತಪುರಂನಲ್ಲಿ ನಡೆಯುತ್ತಿರುವ 62ನೇ ಆವೃತ್ತಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಓಟ ಮುಂದುವರಿಸಿದ್ದಾರೆ.

ಅಂಜುಮ್ ಮಂಗಳವಾರ ಟೂರ್ನಿಯಲ್ಲಿ ಮೂರನೇ ಚಿನ್ನ ಜಯಿಸಿದರು. ಅರ್ಜುನ್ ಬಬುಟಾ ಜೊತೆ 10 ಮೀ. ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಪಂಜಾಬ್‌ಗೆ ಚಿನ್ನ ಜಯಿಸಲು ನೆರವಾದರು.

ಪಶ್ಚಿಮ ಬಂಗಾಳದ ಮೆಹುಲಿ ಪಂದ್ಯಾವಳಿಯಲ್ಲಿ ಐದನೇ ಚಿನ್ನ ಜಯಿಸಿದ್ದಾರೆ. ಅಭಿನವ್ ಶಾ ಅವರೊಂದಿಗೆ ಜೂನಿಯರ್ ಹಾಗೂ ಯೂತ್ ಮಿಕ್ಸೆಡ್ ಟೀಮ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮೆಹುಲಿ ಚಿನ್ನ ಜಯಿಸಿದರು. ಜೂನಿಯರ್ ಫೈನಲ್‌ನಲ್ಲಿ 498.2 ಅಂಕ ಗಳಿಸಿದ ಮೆಹುಲಿ, ಯೂತ್ ಫೈನಲ್‌ನಲ್ಲಿ 498.8 ಅಂಕ ಗಳಿಸಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News