ತಲೈವಾಸ್, ದಿಲ್ಲಿಗೆ ಜಯ

Update: 2018-11-20 18:17 GMT

ಹೊಸದಿಲ್ಲಿ, ನ.20: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ದಿಲ್ಲಿ ದಬಾಂಗ್ ತಂಡಗಳು ಜಯಭೇರಿ ಬಾರಿಸಿವೆ.

ತಮಿಳ್ ತಂಡ ತೆಲುಗು ವಿರುದ್ಧ 27-23 ಅಂತರದ ರೋಚಕ ಜಯ ದಾಖಲಿಸಿತು. ತಮಿಳ್ ಪರ ಅಜಯ್ ಠಾಕೂರ್ 8 ಅಂಕ ಗಳಿಸಿದರೆ, ತೆಲುಗು ಪರ ರಾಹುಲ್ ಚೌಧರಿ ಕೂಡ 8 ಅಂಕ ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಮೆರಾಜ್ ಶೇಖ್ ನಿರ್ಣಾಯಕ 7 ಅಂಕದ ನೆರವಿನಿಂದ ದಿಲ್ಲಿ ದಬಾಂಗ್ ತಂಡ ಗುಜರಾತ್ ತಂಡವನ್ನು 29-26 ಅಂತರದಿಂದ ಸೋಲಿಸಿತು. ಗುಜರಾತ್ ಪರ ಸಚಿನ್ 9 ಅಂಕ ಗಳಿಸಿದರು. ದಿಲ್ಲಿ ಮೊದಲ ಬಾರಿ ಕಬಡ್ಡಿ ಲೀಗ್‌ನಲ್ಲಿ ಗುಜರಾತ್‌ನ್ನು ಸೋಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News