ನಾಯಕ ಕೊಹ್ಲಿಯನ್ನು ಹಿಂದಿಕ್ಕಿದ ಧವನ್

Update: 2018-11-21 18:31 GMT

ಬ್ರಿಸ್ಬೇನ್, ನ.21: ಆಸ್ಟ್ರೇಲಿಯ ವಿರುದ್ಧ ಬುಧವಾರ ಗಾಬಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ 76 ರನ್ ಗಳಿಸಿದ್ದು ವ್ಯರ್ಥವಾಗಿದ್ದರೂ, ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟ್ವೆಂಟಿ-20 ರನ್ ಕಲೆ ಹಾಕುವುದರೊಂದಿಗೆ ನಾಯಕ ಹಾಗೂ ಸಹ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದರು.

 ಮಳೆಬಾಧಿತ 17 ಓವರ್‌ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಭಾರತ 4 ರನ್‌ನಿಂದ ಸೋತಿದೆ. ಧವನ್ 42 ಎಸೆತಗಳಲ್ಲಿ 76 ರನ್ ಗಳಿಸಿದರೂ ಭಾರತ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ವೀರೋಚಿತ ಸೋಲುಂಡಿದೆ.

ಇಂದು 76 ರನ್ ಗಳಿಸಿರುವ ಧವನ್ ಈ ವರ್ಷ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಒಟ್ಟು 646 ರನ್ ಗಳಿಸಿದರು. 2016ರಲ್ಲಿ 641 ರನ್ ಗಳಿಸಿದ ಸಾಧನೆ ಮಾಡಿದ್ದ ಕೊಹ್ಲಿ ಅವರನ್ನು ಹಿಂದಿಕ್ಕಿದರು. ಈ ವರ್ಷ 576 ರನ್ ಗಳಿಸಿರುವ ಪಾಕಿಸ್ತಾನದ ಫಾಕರ್ ಝಮಾನ್ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಆ ಬಳಿಕ ರೋಹಿತ್ ಶರ್ಮಾ(567) ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News