ಯುವರಾಜ ಸಲ್ಮಾನ್‌ ವಿರುದ್ಧದ ಟೀಕೆ ಸಹನೆಯ ಮಟ್ಟವನ್ನು ಮೀರಿದೆ: ಸೌದಿ ವಿದೇಶ ಸಚಿವ

Update: 2018-11-22 14:29 GMT

ಲಂಡನ್, ನ. 22: ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ ವಿರುದ್ಧದ ಟೀಕೆ ‘ಸಹನೆಯ ಮಟ್ಟ’ವನ್ನು ಮೀರಿದೆ ಎಂದು ಸೌದಿ ಅರೇಬಿಯ ಎಚ್ಚರಿಕೆ ನೀಡಿದೆ.

ಸೌದಿ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಭೀಕರ ಹತ್ಯೆಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೌದಿ ಯುವರಾಜನಿಗೆ ದೋಷಮುಕ್ತಿ ನೀಡಿದ ಒಂದು ದಿನದ ಬಳಿಕ ಸೌದಿ ಎಚ್ಚರಿಕೆ ಹೊರಬಿದ್ದಿದೆ.

ಖಶೋಗಿ ಹತ್ಯೆಗೆ ಯುವರಾಜನನ್ನು ಉತ್ತರದಾಯಿಯನ್ನಾಗಿಸಬೇಕು ಎಂಬ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಸೌದಿ ವಿದೇಶ ಸಚಿವ ಆದಿಲ್ ಅಲ್-ಜುಬೈರ್ ಬುಧವಾರ ಹೇಳಿದ್ದಾರೆ.

ತೈಲ ಬೆಲೆ ಇಳಿಕೆಯಲ್ಲಿ ಸೌದಿ ಅರೇಬಿಯ ವಹಿಸಿದ ಪಾತ್ರವನ್ನು ಟ್ರಂಪ್ ಶ್ಲಾಘಿಸಿರುವುದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

‘‘ಸೌದಿ ಅರೇಬಿಯದಲ್ಲಿ ನಮ್ಮ ನಾಯಕತ್ವವನ್ನು ಟೀಕಿಸಬೇಡಿ. ಎರಡು ಪವಿತ್ರ ಮಸೀದಿಗಳ ಮೇಲ್ವಿಚಾರಕ ಹಾಗೂ ದೊರೆ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಟೀಕಿಸಬೇಡಿ’’ ಎಂದು ಬಿಬಿಸಿಗೆ ಸಂದರ್ಶನ ನೀಡಿದ ಜುಬೈರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News