×
Ad

ಆಸ್ಟ್ರೇಲಿಯ ತಂಡ ಪ್ರಕಟ

Update: 2018-11-22 23:43 IST

ಸಿಡ್ನಿ, ನ.22: ಮುಂದಿನ ತಿಂಗಳು ನಡೆಯಲಿರುವ ಭಾರತ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯ ತಂಡ ಪ್ರಕಟವಾಗಿದ್ದು, ಇಬ್ಬರು ಹೊಸ ಆಟಗಾರರಿಗೆ ಮಣೆ ಹಾಕಲಾಗಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧಕ್ಕೆ ಒಳಗಾದ ಬಳಿಕ ಆಸ್ಟ್ರೇಲಿಯ ಟೆಸ್ಟ್ ತಂಡ ಸೊರಗಿದೆ.

ಗುರುವಾರ ಪ್ರಕಟಿಸ ಲಾಗಿರುವ ಆಸ್ಟ್ರೇಲಿಯದ 14 ಸದಸ್ಯರ ತಂಡದಲ್ಲಿ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಹಾಗೂ ವೇಗದ ಬೌಲರ್ ಕ್ರಿಸ್ ಟ್ರೆಮೈನ್ ಸೇರ್ಪಡೆಯಾಗಿದ್ದಾರೆ. ವಿಶ್ವದ ನಂ.1 ತಂಡ ಭಾರತ , ಆಸ್ಟ್ರೇಲಿಯದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಅಡಿಲೇಡ್ ಹಾಗೂ ಪರ್ತ್ ನಲ್ಲಿ ಆಡಲಿದೆ. ಮೊದಲ ಟೆಸ್ಟ್ ಡಿ.6 ರಿಂದ ಆರಂಭವಾಗಲಿದೆ. ಹ್ಯಾರಿಸ್ ಕಳೆದ ತಿಂಗಳು ವಿಕ್ಟೋರಿಯ ದ ಪರ ನ್ಯೂ ಸೌತ್ ವೇಲ್ಸ್ ವಿರುದ್ಧ ಔಟಾಗದೆ 250 ರನ್ ಗಳಿಸಿದ್ದರು. ಮ್ಯಾಟ್ ರೆನ್‌ಶಾ ಬದಲಿಗೆ ಆಯ್ಕೆಯಾಗಿರುವ ಹ್ಯಾರಿಸ್ ಅವರು ಆ್ಯರೊನ್ ಫಿಂಚ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ವಿಕ್ಟೋರಿಯ ಪರ ಮೂರು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದ ಟ್ರೆಮೈನ್ ತಂಡದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಮಂಡಿ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಉಸ್ಮಾನ್ ಖ್ವಾಜಾ ಇದೀಗ ತಂಡಕ್ಕೆ ವಾಪಸಾಗಿದ್ದು, ಟಿಮ್ ಪೈನೆ ನೇತೃತ್ವದ ಆಸೀಸ್ ತಂಡದ ಅಗ್ರ ಕ್ರಮಾಂಕಕ್ಕೆ ಬಲ ನೀಡಲಿದ್ದಾರೆ.

ಆಸ್ಟ್ರೇಲಿಯ ತಂಡ

►ಆ್ಯರೊನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರೆವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್ ಪೈನೆ(ನಾಯಕ), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ನಥಾನ್ ಲಿನ್, ಕ್ರಿಸ್ ಟ್ರಿಮೈನ್ ಹಾಗೂ ಪೀಟರ್ ಸಿಡ್ಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News