×
Ad

ರಣಜಿ: ಮುಂಬೈ ವಿರುದ್ಧ ಕರ್ನಾಟಕ ಮೇಲುಗೈ

Update: 2018-11-22 23:53 IST

ಬೆಳಗಾವಿ, ನ.22: ಸ್ಥಳೀಯ ಆಟಗಾರ ರೋನಿತ್ ಮೋರೆ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಮುಂಬೈ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 205 ರನ್‌ಗೆ ನಿಯಂತ್ರಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ.

ಮೂರನೇ ದಿನವಾದ ಗುರುವಾರ ಕರ್ನಾಟಕದ ಮೊದಲ ಇನಿಂಗ್ಸ್ 400 ರನ್‌ಗೆ ಉತ್ತರವಾಗಿ 2 ವಿಕೆಟ್ ನಷ್ಟಕ್ಕೆ 99 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಮುಂಬೈ 85.5 ಓವರ್‌ಗಳಲ್ಲಿ 205 ರನ್‌ಗೆ ಆಲೌಟಾಯಿತು. 195ರನ್ ಮುನ್ನಡೆ ಬಿಟ್ಟುಕೊಟ್ಟಿತು. ಮುಂಬೈ ಪರ ಆರಂಭಿಕ ಆಟಗಾರ ಬಿಶ್ತ್ ಏಕಾಂಗಿ ಹೋರಾಟ(70,118 ಎಸೆತ,11 ಬೌಂಡರಿ)ನೀಡಿದರು. ರೋನಿತ್ ಮೋರೆ 52 ರನ್‌ಗೆ 5 ವಿಕೆಟ್ ಕಬಳಿಸಿ ಮುಂಬೈಗೆ ಸವಾಲಾದರು. ಪ್ರಸಿದ್ಧ ಕೃಷ್ಣ(2-33) ಹಾಗೂ ಎಸ್.ಗೋಪಾಲ್(2-31) ತಲಾ ಎರಡು ವಿಕೆಟ್ ಪಡೆದರು. ಮುಂಬೈಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಕರ್ನಾಟಕ ಫಾಲೋ-ಆನ್ ಹೇರದೇ ಎರಡನೇ ಇನಿಂಗ್ಸ್ ಆರಂಭಿಸಿದ್ದು ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 81 ರನ್ ಗಳಿಸಿದೆ. ಒಟ್ಟು 276 ರನ್ ಮುನ್ನಡೆಯಲ್ಲಿದೆ.

ಕೆವಿ ಸಿದ್ಧಾರ್ಥ್(30) ಹಾಗೂ ಸ್ಟುವರ್ಟ್ ಬಿನ್ನಿ(2) ಕ್ರೀಸ್ ಕಾಯ್ದುಕೊಂಡಿದ್ದಾರೆ. ಕೆ.ಅಬ್ಬಾಸ್(25) ಹಾಗೂ ನಿಶ್ಚಲ್(11)ಅಲ್ಪ ಮೊತ್ತಕ್ಕೆ ಔಟಾದರು. ಧವಳ್ ಕುಲಕರ್ಣಿ 7 ರನ್‌ಗೆ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ಕರ್ನಾಟಕ ಮೊದಲ ಇನಿಂಗ್ಸ್: 400 ರನ್‌ಗೆ ಆಲೌಟ್

►ಮುಂಬೈ ಮೊದಲ ಇನಿಂಗ್ಸ್: 85.5 ಓವರ್‌ಗಳಲ್ಲಿ 205/10

(ಬಿಸ್ತ್ 70 ,ಮುಲಾನಿ 34, ರೋನಿತ್ ಮೋರೆ 5-52, ಎಸ್.ಗೋಪಾಲ್ 2-31, ಪ್ರಸಿದ್ಧ ಕೃಷ್ಣ 2-33)

►ಕರ್ನಾಟಕ ಎರಡನೇ ಇನಿಂಗ್ಸ್: 81/3

(ಸಿದ್ಧಾರ್ಥ್ ಔಟಾಗದೆ 30, ಧವಳ್ ಕುಲಕರ್ಣಿ 2-7)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News