×
Ad

ಪ್ರಶಸ್ತಿ ಉಳಿಸಿಕೊಂಡ ಸಮೀರ್ ವರ್ಮಾ

Update: 2018-11-25 23:47 IST

ಲಕ್ನೊ, ನ.25: ಭಾರತದ ಸಮೀರ್ ವರ್ಮಾ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ವರ್ಲ್ಡ್ ಟೂರ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

24ರ ಹರೆಯದ ಮಧ್ಯಪ್ರದೇಶದ ಆಟಗಾರ ಸಮೀರ್ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನಾದ ಲು ಗ್ವಾಂಗ್‌ಝು ವಿರುದ್ಧ 16-21, 21-19, 21-14 ಅಂತರದಿಂದ ಜಯ ಸಾಧಿಸಿದರು.

22ರ ಹರೆಯದ ಲು ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ಕೆನಡಾ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು.

ಈ ವರ್ಷ ಸ್ವಿಸ್ ಓಪನ್ ಹಾಗೂ ಹೈದರಾಬಾದ್ ಓಪನ್ ಪ್ರಶಸ್ತಿ ಜಯಿಸಿದ್ದ ಸಮೀರ್‌ಗೆ ಇದು ಮೂರನೇ ಪ್ರಶಸ್ತಿ. ಈ ಪ್ರಶಸ್ತಿ ಗೆಲ್ಲುವ ಮೂಲಕ ಡಿಸೆಂಬರ್‌ನಲ್ಲಿ ನಡೆಯುವ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.

ತಾಳ್ಮೆಯಿಂದ ಆಡಿದ ಸಮೀರ್ ಆರಂಭದಲ್ಲೇ 6-2 ಮುನ್ನಡೆ ಸಾಧಿಸಿದರು. ಆದರೆ, ಮೊದಲ ಗೇಮ್‌ನ್ನು 16-21ರಿಂದ ಸೋತರು. ಮೊದಲ ಗೇಮ್ ಸೋಲಿನಿಂದ ಬೇಗನೆ ಎಚ್ಚೆತ್ತ ಸಮೀರ್ ಉಳಿದೆರಡು ಗೇಮ್‌ಗಳನ್ನು 21-19, 21-14 ಅಂತರದಿಂದ ವಶಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News