12ನೇ ಆವೃತ್ತಿಯ ಐಪಿಎಲ್: ಡಿ.18ಕ್ಕೆ ಆಟಗಾರರ ಹರಾಜು

Update: 2018-11-25 18:21 GMT

ಹೊಸದಿಲ್ಲಿ, ನ.25: ಮುಂದಿನ ವರ್ಷ ನಡೆಯಲಿರುವ 12ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿ.18 ರಂದು ಜೈಪುರದಲ್ಲಿ ನಡೆಯಲಿದೆ. ನಿಗದಿತ ಬೆಳಗ್ಗೆ 10 ಗಂಟೆಯ ಬದಲಿಗೆ ಮಧ್ಯಾಹ್ನ 3ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ರಾತ್ರಿ 9:30ರ ತನಕ ನಡೆಯಲಿದೆ.

ಬಿಸಿಸಿಐ ಈ ವರ್ಷದ ಹರಾಜು ಕಾರ್ಯಕ್ರಮದ ವೇಳಾಪಟ್ಟಿಯನ್ನು ಬದಲಿಸಲು ನಿರ್ಧರಿಸಿತು. ಹೆಚ್ಚು ವೀಕ್ಷಕರನ್ನು ಸೆಳೆಯಲು ಬಿಸಿಸಿಐ ಹಾಗೂ ನೇರ ಪ್ರಸಾರ ಮಾಡಲಿರುವ ಸ್ಟಾರ್ ಚಾನಲ್ ಮಧ್ಯಾಹ್ನ ಹಾಗೂ ಸಂಜೆ ವೇಳೆ ಹರಾಜಿನ ಪ್ರಸಾರ ಮಾಡಲು ಒಲವು ತೋರಿದ್ದವು. ಈ ಬಾರಿ ಒಂದೇ ದಿನದಲ್ಲಿ ಹರಾಜು ಕೊನೆಗೊಳ್ಳಲಿದೆ.

2019ರ ಐಪಿಎಲ್‌ನ ದಿನಾಂಕ ಹಾಗೂ ಸ್ಥಳ ಇನ್ನಷ್ಟೇ ಅಂತಿಮವಾಗಬೇಕಾಗಿದೆ. ಆದರೆ, ಎಲ್ಲವೂ 2019ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಅವಲಂಬಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News