ಟಾಪ್ ಯೋಜನೆಗೆ ಸೇರ್ಪಡೆಯಾಗುವ ವಿಶ್ವಾಸದಲ್ಲಿ ಸ್ವಪ್ನಾ

Update: 2018-11-27 18:56 GMT

ಕೋಲ್ಕತಾ, ನ.27: ಕೇಂದ್ರ ಸರಕಾರದ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಒಲಿಂಪಿಕ್ಸ್ ಟಾರ್ಗೆಟ್ ಪೋಡಿಯಂ ( ಟಾಪ್)ನಿಂದ ಏಶ್ಯನ್ ಗೇಮ್ಸ್ ಚಾಂಪಿಯನ್ ಅಥ್ಲೀಟ್ ಸ್ವಪ್ನಾ ಬರ್ಮನ್‌ರನ್ನು ಕೈಬಿಡಲಾಗಿದೆ.

ಸ್ವಪ್ನಾ ಅವರ ಏಶ್ಯನ್ ಗೇಮ್ಸ್ ಸಾಧನೆ ಒಲಿಂಪಿಕ್ಸ್ ಸ್ಥಾನಮಾನಕ್ಕಿಂತ ಕಡಿಮೆಯಿದೆ. ಹೀಗಾಗಿ ಅವರನ್ನು ಟಾಪ್ ಯೋಜನೆಯಿಂದ ಹೊರಗಿಡಲಾಗಿದೆ. ‘‘ಟಾಪ್‌ನಿಂದ ಕೈಬಿಟ್ಟಿರುವ ಬಗ್ಗೆ ನಾನೇನು ಹೇಳಲಾರೆ. ಇದು ಕ್ರೀಡಾ ಸಚಿವಾಲಯದ ನಿರ್ಧಾರ. ಉತ್ತಮ ಪ್ರದರ್ಶನ ನೀಡುವುದು ನನ್ನ ಕೆಲಸ. ನಾನು ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಟಾಪ್ ಯೋಜನೆಯಲ್ಲಿದ್ದೆ. ಇದೀಗ ಮತ್ತೆ ಟಾಪ್ ಯೋಜನೆಗೆ ಸೇರಿಸಿಕೊಳ್ಳುವ ವಿಶ್ವಾಸವಿದೆ’’ ಎಂದು ಸ್ವಪ್ನಾ ಹೇಳಿದರು. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆರನೇ ಪ್ರಶಸ್ತಿ ಜಯಿಸಿರುವ ಮೇರಿಕೋಮ್ ತನಗೆ ಸ್ಫೂರ್ತಿಯಾಗಿದ್ದಾರೆ ಎಂದ ಸ್ವಪ್ನಾ,‘‘ 36ನೇ ವಯಸ್ಸಿನಲ್ಲಿ ಅವರ ಈ ಸಾಧನೆ ಅದ್ಭುತ. ನನಗೆ 22 ವಯಸ್ಸು. ನಾನು ಕೂಡ ಆಕೆಯಂತಾಗಲು ಬಯಸುವೆ. ಆಕೆಯಂತೆ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ಆ ನಿಟ್ಟಿಯಲ್ಲಿ ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ’’ ಎಂದರು. ನನ್ನ ಕಾಲಿಗೆ ಹೊಂದುವ ಶೂಗಾಗಿ ಕಾಯುತ್ತಿದ್ದು, ಅದು ನನ್ನ ಕೈಸೇರಿದ ತಕ್ಷಣ ಅಭ್ಯಾಸ ಆರಂಭಿಸುವೆ. ನಾನು ಜರ್ಮನಿಗೆ ತೆರಳಿ ನನ್ನ ಕಾಲಿನ ಅಳತೆ ನೀಡಿದ್ದೇನೆ. ಶೂಗಳು ಈಗಾಗಲೇ ಹೊಸದಿಲ್ಲಿಗೆ ಬಂದಿದೆ. ನಾನು ಶೂ ಇಲ್ಲಿಗೆ ಸರಬರಾಜಾಗುವುದನ್ನು ಕಾಯುತ್ತಿರುವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News