ಹಾಕಿ ವಿಶ್ವಕಪ್ ಮೊದಲ ಪಂದ್ಯ: ಕೆನಡಾವನ್ನು ಮಣಿಸಿದ ಬೆಲ್ಜಿಯಂ

Update: 2018-11-28 14:05 GMT

ಭುವನೇಶ್ವರ, ನ.28: ಹದಿನಾಲ್ಕನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಕಳಿಂಗ ಸ್ಟೇಡಿಯಂನಲ್ಲಿ ಬುಧವಾರ ನಡೆದ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಕೆನಡಾವನ್ನು ಬೆಲ್ಜಿಯಂ 2-1 ಅಂತರದಲ್ಲಿ ಮಣಿಸಿದೆ.

ಬೆಲ್ಜಿಯಂನ ಫೆಲಿಕ್ಸ್ ಡೆನಾಯೆರ್ 3ನೇ ನಿಮಿಷದಲ್ಲಿ ಬೆಲ್ಜಿಯಂನ ಗೋಲು ಖಾತೆ ತೆರದರು. 22ನೇ ನಿಮಿಷದಲ್ಲಿ ನಾಯಕ ಥಾಮಸ್ ಬಿರಿಲ್ಸ್ ಗೋಲು ಜಮೆ ಮಾಡಿ 2-0 ಮುನ್ನಡೆ ಸಾಧಿಸಲು ನೆರವಾದರು. ಪ್ರಥಮಾರ್ಧದಲ್ಲಿ ಬೆಲ್ಜಿಯಂ 2-0 ಮುನ್ನಡೆ ಕಾಯ್ದುಕೊಂಡಿತ್ತು. 48ನೇ ನಿಮಿಷದಲ್ಲಿ ಕೆನಡಾದ ಮಾರ್ಕ್ ಪಿಯರ್ಸನ್ ಗೋಲು ಬಾರಿಸಿದರು. ಕೆನಡಾದ ಆಟಗಾರರು ಬಳಿಕ ಗೋಲು ಗಳಿಸಲು ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News