ದಕ್ಷಿಣ ಆಫ್ರಿಕವನ್ನು ಬಗ್ಗು ಬಡಿದ ಭಾರತ 5 -0 ಅಂತರದಲ್ಲಿ ಭರ್ಜರಿ ಗೆಲುವು

Update: 2018-11-28 15:32 GMT

ಭುವನೇಶ್ವರ, ನ.28: ಹದಿನಾಲ್ಕನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕ ವಿರುದ್ಧ ಭಾರತ 5-0 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.

ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಕೆನಡಾವನ್ನು ಬೆಲ್ಜಿಯಂ ಮಣಿಸಿತ್ತು. ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ ಗೆಲುವಿನ ನಗೆ ಬೀರಿತು. ಭಾರತ ಪ್ರಥಮ ಕ್ವಾರ್ಟರ್‌ನಲ್ಲಿ 2 ಗೋಲು ದಾಖಲಿಸಿ ಮೇಲುಗೈ ದಾಖಲಿಸಿತ್ತು. 10ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಮತ್ತು 12ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಗೋಲು ಬಾರಿಸಿದರು.

ದ್ವಿತೀಯ ಕ್ವಾರ್ಟರ್‌ನಲ್ಲಿ ಗೋಲು ಬರಲಿಲ್ಲ. ಈ ಕಾರಣದಿಂದಾಗಿ ದ್ವಿತೀಯಾರ್ಧ ಪೂರ್ಣಗೊಂಡಾಗ ಭಾರತ 2-0 ಮುನ್ನಡೆ ಸಾಧಿಸಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಸಿಮ್ರಾನ್‌ಜಿತ್ ಸಿಂಗ್ (43ನೇ ನಿಮಿಷ) ಮತ್ತು ಲಲಿತ್ ಉಪಾಧ್ಯಾಯ (45ನೇ ನಿ.) ಗೋಲು ಜಮೆ ಮಾಡಿದರು. ಭಾರತಕ್ಕೆ 4-0 ಮುನ್ನಡೆ.

ಕೊನೆಯಲ್ಲಿ ಸಿಮ್ರಾನ್‌ಜಿತ್ ಸಿಂಗ್(46ನೇ ನಿ.) ಎರಡನೇ ಗೋಲು ದಾಖಲಿಸುವ ಮೂಲಕ ಭಾರತ 5-0 ಅಂತರದಲ್ಲಿ ಜಯ ದಾಖಲಿಸಿತು.

,,,,,

ಭಾರತ - ದಕ್ಷಿಣ ಆಫ್ರಿಕ

5 - 0

ಮನ್‌ದೀಪ್ ಸಿಂಗ್ 10ನೇ ನಿಮಿಷ

ಆಕಾಶ್‌ದೀಪ್ ಸಿಂಗ್ 12ನೇ ನಿಮಿಷ

ಸಿಮ್ರಾನ್‌ಜಿತ್ ಸಿಂಗ್ 43ನೇ ನಿಮಿಷ

ಲಲಿತ್ ಉಪಾಧ್ಯಾಯ 45ನೇ ನಿಮಿಷ

ಸಿಮ್ರಾನ್‌ಜಿತ್ ಸಿಂಗ್ 46ನೇ ನಿಮಿಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News