ಪ್ರೊ ಕಬಡ್ಡಿ: ಗುಜರಾತ್‌ಗೆ ಸುಲಭ ಗೆಲುವು
ಪುಣೆ, ನ.29: ಗುಜರಾತ್ ಫೋರ್ಚುನ್‌ಜೈಂಟ್ಸ್ ತಂಡ ಗುರುವಾರ ನಡೆದ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟನ್ ವಿರುದ್ಧ 35-20 ಅಂತರದಿಂದ ಸುಲಭ ಜಯ ದಾಖಲಿಸಿದೆ.
ಸಚಿನ್(7 ಅಂಕ) ಹಾಗೂ ಪ್ರಪಂಜನ್(5 ಅಂಕ)ಒಟ್ಟಿಗೆ 12 ಅಂಕ ಗಳಿಸಿದರೆ, ಗುಜರಾತ್‌ನ ಡಿಫೆನ್ಸ್ ಆಟಗಾರರು 14 ಟ್ಯಾಕಲ್ ಅಂಕ ಗಳಿಸಿ ತಂಡಕ್ಕೆ ಗೆಲುವು ತಂದರು. ಪುಣೇರಿ ಪರ ಸಂದೀಪ್ ನರ್ವಾಲ್ ಏಳು ಅಂಕ ಗಳಿಸಿದರು. 15 ಪಂದ್ಯಗಳಲ್ಲಿ ಒಟ್ಟು 63 ಅಂಕ ಗಳಿಸಿರುವ ಗುಜರಾತ್ ಅಂಕಪಟ್ಟಿಯ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಪುಣೇರಿ 18 ಪಂದ್ಯಗಳಲ್ಲಿ 47 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ.
ವಾರಿಯರ್ಸ್‌ಗೆ ಸೋತ ಬೆಂಗಳೂರು ಬುಲ್ಸ್
ದಿನದ ಮತ್ತೊಂದು ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ ತಂಡ ಮಣಿಂದರ್ ಸಿಂಗ್(17 ಅಂಕ)ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವನ್ನು 44-37 ಅಂತರದಿಂದ ಮಣಿಸಿತು.
ಸಿಂಗ್‌ಗೆ ರವೀಂದ್ರ(8 ಅಂಕ)ಉತ್ತಮ ಸಾಥ್ ನೀಡಿದ್ದಾರೆ. ಬೆಂಗಳೂರು ಪರ ರೋಹಿತ್ ಕುಮಾರ್ ಹಾಗೂ ಹರೀಶ್ ನಾಯಕ್ ತಲಾ 9 ಅಂಕ ಗಳಿಸಿದರು. ಪವನ್ ಕುಮಾರ್ ಏಳಂಕವನ್ನು ಗಳಿಸಿದರು.