×
Ad

ಸ್ಪೇನ್ ಗೆ ಸೋಲುಣಿಸಿದ ಅರ್ಜೆಂಟೀನ

Update: 2018-11-29 23:45 IST

ಭುವನೇಶ್ವರ, ನ.29: ಪುರುಷರ ವಿಶ್ವಕಪ್ ಹಾಕಿ ಟೂರ್ನಮೆಂಟ್‌ನ ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಅರ್ಜೆಂಟೀನ ತಂಡ 4-3 ಗೋಲುಗಳ ಅಂತರದಲ್ಲಿ ಮಣಿಸಿದೆ. ಅರ್ಜೆಂಟೀನ ಪರ ಆಗಸ್ಟಿನ್ ಮಝಿಲ್ಲಿ ಹಾಗೂ ಹೆನ್ರಿಕ್ ಗೊಂಝಾಲೆಝ್ ತಲಾ 2 ಗೋಲ್ ದಾಖಲಿಸಿದರು. ಉಭಯ ತಂಡಗಳು ಇಂದಿನ ಆಟದಲ್ಲಿ ಆಕ್ರಮಣಕಾರಿ ಆಟವನ್ನಾಡಿದ್ದವು. ಆದರೆ ಅಂತಿಮವಾಗಿ ಅರ್ಜೆಂಟೀನಕ್ಕೆ ಗೆಲುವು ದೊರೆಯಿತು. ಸ್ಪೇನ್ ತಂಡ 3ನೇ ನಿಮಿಷದಲ್ಲಿ ಗೋಲು ಖಾತೆ ತೆರೆದಿತ್ತು. ಹೆನ್ರಿಕ್ ಗೊಂಝಾಲೆಝ್ ಗೋಲು ಜಮೆ ಮಾಡಿದ್ದರು. ಒಂದು ನಿಮಿಷ ಕಳೆಯುವಷ್ಟರಲ್ಲಿ ಅರ್ಜೆಂಟೀನದ ಅಗಸ್ಟಿನ್ ಮಝಿಲ್ಲಿ ಚೆಂಡನ್ನು ಗುರಿಯತ್ತ ಕಳುಹಿಸಿದರು. ಇದರೊಂದಿಗೆ 1-1 ಸಮಬಲ ಸಾಧಿಸಿತು.

ಮುಂದಿನ 9 ನಿಮಿಷಗಳಲ್ಲಿ ಎರಡೂ ತಂಡಗಳ ನಡುವೆ ಗೋಲು ಗಳಿಸಲು ಹೋರಾಟ ನಡೆಯಿತು. ಉಭಯ ತಂಡಗಳಿಂದಲೂ ಗೋಲು ಗಳಿಸಲು ಹಲವು ಅವಕಾಶಗಳು ಸೃಷ್ಟಿಯಾದರೂ 14ನೇ ನಿಮಿಷದ ತನಕ ಎರಡೂ ತಂಡಗಳ ಪ್ರಯತ್ನ ವಿಫಲಗೊಂಡಿತು.

14ನೇ ನಿಮಿಷದಲ್ಲಿ ಸ್ಪೇನ್‌ನ ಜೋಸೆಫ್ ರೊಮೆಯು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಜಮೆ ಮಾಡಿದರು. 15ನೇ ನಿಮಿಷದಲ್ಲಿ ಅರ್ಜೆಂಟೀನದ ಆಗಸ್ಟಿನ್ ಮಝಿಲ್ಲಿ ತನ್ನ ಎರಡನೇ ಗೋಲು ಜಮೆ ಮಾಡಿದರು. ಡ್ರಾಗ್ ಫ್ಲಿಕ್ ಸ್ಪೆಶಲಿಸ್ಟ್ ಪೆಲ್ಲಾಟ್ ಗೋಲು ಜಮೆ ಮಾಡುವುದರೊಂದಿಗೆ ಅರ್ಜೆಂಟೀನ 3-2 ಮುನ್ನಡೆ ಗಳಿಸಿತು.

ಪ್ರಥಮಾರ್ಧದಲ್ಲಿ ಒಟ್ಟು 5 ಗೋಲುಗಳು ಜಮೆ ಆಗಿದ್ದವು. ಬಳಿಕ 35ನೇ ನಿಮಿಷದಲ್ಲಿ ವಿನ್ಸ್ ರುಯಿಝ್ ಗೋಲು ಜಮೆ ಮಾಡಿದರು. ಫೈನಲ್ ಕ್ವಾರ್ಟರ್‌ನಲ್ಲಿ ಡ್ರಾಗ್ ಫ್ಲಿಕ್ ಸ್ಪೆಶಲಿಸ್ಟ್ ಪೆಲ್ಲಾಟ್(49ನೇ ನಿಮಿಷ) ಗೋಲು ಗಳಿಸಿ ಅರ್ಜೆಂಟೀನದ ಗೆಲುವಿಗೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News