ನ್ಯೂಝಿಲೆಂಡ್‌ಗೆ ಜಯ
Update: 2018-11-29 23:46 IST
ಭುವನೇಶ್ವರ, ನ.29: ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಫ್ರಾನ್ಸ್ ವಿರುದ್ಧ ನ್ಯೂಝಿಲೆಂಡ್ 2-1 ಅಂತರದಲ್ಲಿ ಜಯ ಗಳಿಸಿದೆ.
ಕಳಿಂಗ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಕೇನ್ ರಸೆಲ್ 17ನೇ ನಿಮಿಷದಲ್ಲಿ ಮತ್ತು ಸ್ಟೀಫನ್ ಜೆನ್ನಿಸ್ 56ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ತಂಡದ ಗೆಲುವಿಗೆ ನೆರವಾದರು. ಆದರೆ ಫ್ರಾನ್ಸ್ ತಂಡದ ವಿಕ್ಟರ್ ಚಾರ್ಲೆಟ್ 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸಿದರೂ ತಂಡದ ಸೋಲು ತಪ್ಪಲಿಲ್ಲ.