ಚತುರ್ದಿನ ಅಭ್ಯಾಸ ಪಂದ್ಯ: ಕ್ರಿಕೆಟ್ ಆಸ್ಟ್ರೇಲಿಯ ದಿಟ್ಟ ಉತ್ತರ

Update: 2018-11-30 18:09 GMT

ಸಿಡ್ನಿ, ನ.30: ಭಾರತ ವಿರುದ್ಧದ ಚತುರ್ದಿನ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ದಿಟ್ಟ ಉತ್ತರ ನೀಡಿದ್ದು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 356 ರನ್ ಗಳಿಸಿದೆ. ಭಾರತದ ಮೊದಲ ಇನಿಂಗ್ಸ್‌ಗಿಂತ ಕೇವಲ 2 ರನ್‌ನಿಂದ ಹಿಂದಿದೆ.

ಅಭ್ಯಾಸ ಪಂದ್ಯದ ಮೂರನೇ ದಿನವಾದ ಶುಕ್ರವಾರದ ಆಟ ಕೊನೆಗೊಂಡಾಗ ಹ್ಯಾರಿ ನೀಲ್ಸನ್(56) ಹಾಗೂ ಆ್ಯರೊನ್ ಹಾರ್ಡ್ಲಿ(69)ಕ್ರೀಸ್ ಕಾಯ್ದುಕೊಂಡಿದ್ದಾರೆ.

ವಿಕೆಟ್ ನಷ್ಟವಿಲ್ಲದೆ 24 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ಮೊದಲ ವಿಕೆಟ್‌ಗೆ 114 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಪಡೆದಿತ್ತು. ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಆಟಗಾರರಾದ ಡಿಆರ್ಕಿ ಶಾರ್ಟ್(74) ಹಾಗೂ ಮ್ಯಾಕ್ಸ್ ಬ್ರಿಯಾಂಟ್(62)ಉತ್ತಮ ಪ್ರದರ್ಶನ ನೀಡಿದರು.

 ಜಾಕ್ ಕಾರ್ಡರ್(38) ಹಾಗೂ ಸ್ಯಾಮ್ ವೈಟ್‌ಮ್ಯಾನ್(35) ಎರಡಂಕೆಯ ಸ್ಕೋರ್ ಗಳಿಸಿದರು. ಪರಾಮ್ ಉಪ್ಪಲ್(5) ಹಾಗೂ ಜೋನಾಥನ್ ಮೆರ್ಲೊ(3) ನಿರಾಸೆಗೊಳಿಸಿದರು.

ಭಾರತದ ಪರ ಮುಹಮ್ಮದ್ ಶಮಿ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಉಮೇಶ್ ಯಾದವ್ ಹಾಗೂ ಆರ್.ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.

ಅಭ್ಯಾಸ ಪಂದ್ಯ ಮೊದಲ ದಿನದಾಟ ಮಳೆಗಾಹುತಿಯಾಗಿತ್ತು. ಎರಡನೇ ದಿನ ಭಾರತ 92 ಓವರ್‌ಗಳಲ್ಲಿ 358 ರನ್ ಗಳಿಸಿ ಆಲೌಟಾಗಿತ್ತು. ಆರಂಭಿಕ ಆಟಗಾರ ಪೃಥ್ವಿ ಶಾ(66), ನಾಯಕ ವಿರಾಟ್ ಕೊಹ್ಲಿ(64), ಅಜಿಂಕ್ಯ ರಹಾನೆ(56), ಚೇತೇಶ್ವರ ಪೂಜಾರ(54), ಹನುಮ ವಿಹಾರಿ(53) ಹಾಗೂ ರೋಹಿತ್ ಶರ್ಮಾ(40)ಮಹತ್ವದ ಕೊಡುಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News