×
Ad

ಹಾಕಿ ವಿಶ್ವಕಪ್: ಕೆನಡಾವನ್ನು 5-1 ಅಂತರದಿಂದ ಮಣಿಸಿ ಭಾರತ ಕ್ವಾರ್ಟರ್ ಫೈನಲ್‌ಗೆ

Update: 2018-12-08 20:45 IST

ಭುವನೇಶ್ವರ, ಡಿ.8: ಲಲಿತ್ ಉಪಾಧ್ಯಾಯ ಅವಳಿ ಗೋಲು ನೆರವಿನಿಂದ ಭಾರತ ತಂಡ ಕೆನಡಾವನ್ನು 5-1 ಅಂತರದಿಂದ ಮಣಿಸಿ ಹಾಕಿ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೆ ನೇರ ಪ್ರವೇಶ ಪಡೆದಿದೆ.

ಕಳಿಂಗ ಸ್ಟೇಡಿಯಂನಲ್ಲಿ ಶನಿವಾರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 12ನೇ ನಿಮಿಷದಲ್ಲಿ ಗೋಲು ಗಳಿಸಿದ ಹರ್ಮನ್‌ಪ್ರೀತ್ ಸಿಂಗ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 39ನೇ ನಿಮಿಷದಲ್ಲಿ ಗೋಲು ಗಳಿಸಿದ ಕೆನಡಾದ ಫ್ಲೋರಿಸ್ ವಾನ್ ಸನ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

ಚಿಂಗ್ಲೆನ್‌ಸನಾ ಸಿಂಗ್(46ನೇ ನಿ.)ಹಾಗೂ ಲಲಿತ್ ಉಪಾಧ್ಯಾಯ(47ನೇ ನಿಮಿಷ)ಬೆನ್ನುಬೆನ್ನಿಗೆ ಎರಡು ಗೋಲು ಗಳಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ಏರಿಸಿದರು. ಯುವ ಆಟಗಾರ ಅಮಿತ್ ರೋಹಿದಾಸ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆ ಹಿಗ್ಗಿಸಿದರು. 57ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಲಲಿತ್ ಭಾರತಕ್ಕೆ 5-1 ಅಂತರದ ಭರ್ಜರಿ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತ ಡಿ.13 ರಂದು ನಡೆಯುವ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಭಾರತ ಮೊದಲ ಪಂದ್ಯದಲ್ಲಿ ದ.ಆಫ್ರಿಕವನ್ನು 5-0 ಅಂತರದಿಂದ ಮಣಿಸಿದರೆ, ಫ್ರಾನ್ಸ್ ವಿರುದ್ಧದ 2ನೇ ಪಂದ್ಯವನ್ನು 2-2ರಿಂದ ಡ್ರಾಗೊಳಿಸಿತ್ತು.

...........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News