ಆಸೀಸ್‌ನ ರಿಕ್ಸನ್ ಶ್ರೀಲಂಕಾ ಫೀಲ್ಡಿಂಗ್ ಕೋಚ್
Update: 2018-12-09 10:14 IST
ಕೊಲಂಬೊ, ಡಿ.8: ಸತತ ವೈಫಲ್ಯದಿಂದ ಬಳಲುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡ ಮುಂದಿನ ವರ್ಷ ಆರಂಭವಾಗುವ ವಿಶ್ವಕಪ್ ಟೂರ್ನಿಗೆ ಸಜ್ಜಾಗುವ ಉದ್ದೇಶದಿಂದ ಆಸ್ಟ್ರೇಲಿಯದ ಮಾಜಿ ಆಟಗಾರ ಸ್ಟೀವ್ ರಿಕ್ಸನ್‌ರನ್ನು ಶನಿವಾರ ತನ್ನ ನೂತನ ಫೀಲ್ಡಿಂಗ್ ಕೋಚ್ ಆಗಿ ನೇಮಿಸಿದೆ. 64 ವರ್ಷ ವಯಸ್ಸಿನ ರಿಕ್ಸನ್ ಈ ತಿಂಗಳಿನ ನಂತರ ತನ್ನ ಹೊಸ ಜವಾಬ್ದಾರಿಯನ್ನು ನಿಭಾಯಿಸಲಿದ್ದು, ಡಿಸೆಂಬರ್ 15ರಿಂದ ಶ್ರೀಲಂಕಾ ತಂಡವು ನ್ಯೂಝಿಲೆಂಡ್ ವಿರುದ್ಧ 2 ಟೆಸ್ಟ್, ಮೂರು ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯವನ್ನಾಡಲಿದ್ದು, ಈ ವೇಳೆ ನ್ಯೂಝಿಲೆಂಡ್‌ನಲ್ಲಿಯೇ ರಿಕ್ಸನ್ ತಂಡ ಸೇರಿಕೊಳ್ಳಲಿದ್ದಾರೆ.
ನ್ಯೂಝಿಲೆಂಡ್ ಸರಣಿಯ ಬಳಿಕ ಜೂ.24ರಿಂದ ಆಸೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಶ್ರೀಲಂಕಾ ಆಡಲಿದೆ.