ಪಾಕ್ ದಾಖಲೆ ಮುರಿದ ಆಸೀಸ್

Update: 2018-12-09 04:50 GMT

ಭುವನೇಶ್ವರ, ಡಿ.8: ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚೀನಾದ ವಿರುದ್ಧ ಶುಕ್ರವಾರ 11-0 ಅಂತರದಿಂದ ಜಯ ಸಾಧಿಸಿದ್ದ ಆಸ್ಟ್ರೇಲಿಯ 36 ವರ್ಷಗಳ ಹಿಂದೆ ಪಾಕಿಸ್ತಾನ ವಿಶ್ವಕಪ್‌ನಲ್ಲಿ ನಿರ್ಮಿಸಿದ್ದ ದಾಖಲೆಯೊಂದನ್ನು ಮುರಿಯಿತು.

ಪಾಕ್ ತಂಡ 1978ರ ವಿಶ್ವಕಪ್(8 ಪಂದ್ಯ) ಹಾಗೂ 1982ರ ವಿಶ್ವಕಪ್‌ನಲ್ಲಿ(7 ಪಂದ್ಯ) ಸತತ 15 ಪಂದ್ಯಗಳನ್ನು ಜಯಿಸಿತ್ತು. ಇದೀಗ ಆಸ್ಟ್ರೇಲಿಯ 2010ರಿಂದ ಈಗ ನಡೆಯುತ್ತಿರುವ ವಿಶ್ವಕಪ್ ತನಕ ಸತತ 16 ಪಂದ್ಯಗಳನ್ನು ಜಯಿಸಿದೆ. ಆಸ್ಟ್ರೇಲಿಯ 2010ರಲ್ಲಿ 6, 2014ರಲ್ಲಿ 7 ಹಾಗೂ ಪ್ರಸ್ತುತ ವಿಶ್ವಕಪ್‌ನಲ್ಲಿ ಸತತ ಮೂರು ಗೆಲುವು ದಾಖಲಿಸಿದೆ.

ಈಗಾಗಲೇ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಆಸೀಸ್‌ಗೆ ತನ್ನ ಗೆಲುವಿನ ಓಟವನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News