ಮೊದಲ ಟೆಸ್ಟ್ : ಆಸ್ಟ್ರೇಲಿಯದ ಗೆಲುವಿಗೆ 323 ರನ್ ಗುರಿ

Update: 2018-12-09 05:05 GMT

ಆಡಿಲೇಡ್ , ಡಿ.9: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಪ್ರವಾಸಿ ಭಾರತದ ವಿರುದ್ಧ ಆಸ್ಟ್ರೇಲಿಯ ಗೆಲುವಿಗೆ 323 ರನ್ ಗಳ ಸವಾಲು ಪಡೆದಿದೆ.

ಟೆಸ್ಟ್ ನ ನಾಲ್ಕನೇ ದಿನವಾಗಿರುವ ರವಿವಾರ ಭಾರತ ಎರಡನೇ ಇನಿಂಗ್ಸ್ ನಲ್ಲಿ 106.5  ಓವರ್ ಗಳಲ್ಲಿ 307 ರನ್ ಗಳಿಗೆ ಆಲೌಟಾಗಿದೆ. 

ಮೂರನೇ ದಿನದಾಟದಂತ್ಯಕ್ಕೆ ಭಾರತ ಎರಡನೇ ಇನಿಂಗ್ಸ್ ನಲ್ಲಿ 61 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತ್ತು. ಚೇತೇಶ್ವರ ಪೂಜಾರ 40 ರನ್ ಮತ್ತು ಅಜಿಂಕ್ಯ ರಹಾನೆ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.

ನಾಲ್ಕನೇ ದಿನದ  ಆಟ ಮುಂದುವರಿಸಿದ ಭಾರತ ಈ ಮೊತ್ತಕ್ಕೆ 156 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಪೂಜಾರ 71 ರನ್ ಮತ್ತು ರಹಾನೆ 70 ರನ್ , ವಿಕೆಟ್ ಕೀಪರ್ ರಿಷಭ್ ಪಂತ್ 28 ರನ್  ಗಳಿಸಿದರು.

ಆಸ್ಟ್ರೇಲಿಯದ ಜೋಶ್ ಹೆಝಲ್ ವುಡ್ 52ಕ್ಕೆ 3 ವಿಕೆಟ್, ಮಿಚೆಲ್  ಸ್ಟಾರ್ಕ್ , ಪಾಟ್ ಕಮಿನ್ಸ್ , ನಥಾನ್ ಲಿಯೊನ್  ತಲಾ 2 ವಿಕೆಟ್ ಪಡೆದರು.

ಆಸ್ಟ್ರೇಲಿಯ  ಎರಡನೇ ಇನಿಂಗ್ಸ್ ನಲ್ಲಿ 12 ಓವರ್ ಗಳ ಮುಕ್ತಾಯಕ್ಕೆ 1 ವಿಕೆಟ್ ನಷ್ಟದಲ್ಲಿ 28 ರನ್ ಗಳಿಸಿದೆ. ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್ (11) ಅವರು ಅಶ್ವಿನ್ ಗೆ ವಿಕೆಟ್ ಒಪ್ಪಿಸಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News