ಬ್ರೆಕ್ಸಿಟ್ ಒಪ್ಪಂದದಲ್ಲಿ ಮಾರ್ಪಾಡು ತಿರಸ್ಕರಿಸಿದ ಐರೋಪ್ಯ ಒಕ್ಕೂಟ

Update: 2018-12-15 16:10 GMT

ಲಂಡನ್, ಡಿ. 15: ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹೊರತರುವ ಬ್ರೆಕ್ಸಿಟ್ ಒಪ್ಪಂದಕ್ಕೆ ಸಂಬಂಧಿಸಿ ಪ್ರಧಾನಿ ತೆರೇಸಾ ಮೇ ಈಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.

ಅವರು ಇತ್ತೀಚೆಗೆ ಐರೋಪ್ಯ ಒಕ್ಕೂಟದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಮಾಡಿಕೊಂಡಿರುವ ಬ್ರೆಕ್ಸಿಟ್ ಒಪ್ಪಂದವನ್ನು ದೇಶದ ಸಂಸದರು ತಿರಸ್ಕರಿಸಿದ್ದಾರೆ ಹಾಗೂ ಅದು ಸಂಸತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆ ತೀರಾ ವಿರಳವಾಗಿದೆ.

ಹಾಗಾಗಿ, ಸಂಸದರಿಗೆ ಒಪ್ಪಿಗೆಯಾಗುವಂತೆ ಒಪ್ಪಂದದಲ್ಲಿ ಏನಾದರೂ ಮಾರ್ಪಾಡು ಮಾಡಿಕೊಳ್ಳೋಣ ಎಂದು ಐರೋಪ್ಯ ಒಕ್ಕೂಟದ ನಾಯಕರ ಬಳಿಗೆ ಹಿಂದಿರುಗಿದರೆ, ಅವರು ಈ ಪ್ರಸ್ತಾಪವನ್ನೇ ತಿರಸ್ಕರಿಸಿದ್ದಾರೆ.

ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಭರವಸೆಗಳನ್ನು ನೀಡುವಂತೆ ತೆರೇಸಾ ಮಾಡಿಕೊಂಡಿರುವ ಮನವಿಗಳನ್ನು ಐರೋಪ್ಯ ಒಕ್ಕೂಟ ಗುರುವಾರ ರಾತ್ರಿ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News