ಇಥಿಯೋಪಿಯ: ಜನಾಂಗೀಯ ಸಂಘರ್ಷಕ್ಕೆ 21 ಬಲಿ

Update: 2018-12-15 16:13 GMT

ಅಡಿಸ್ ಅಬಾಬ (ಇಥಿಯೋಪಿಯ), ಡಿ. 15: ದಕ್ಷಿಣ ಇಥಿಯೋಪಿಯದಲ್ಲಿ ವಿವಿಧ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಹಾಗೂ 61 ಮಂದಿ ಗಾಯಗೊಂಡಿದ್ದಾರೆ ಎಂದು ದೇಶದ ಸರಕಾರಿ ಸುದ್ದಿ ಸಂಸ್ಥೆ ಇಥಿಯೋಪಿಯ ನ್ಯೂಸ್ ಏಜನ್ಸಿ ಶನಿವಾರ ವರದಿ ಮಾಡಿದೆ.

ಅದೇ ವೇಳೆ, ಹಿಂಸಾಚಾರಕ್ಕೆ ಬೆದರಿ ನೂರಾರು ಮಂದಿ ಗಡಿ ದಾಟಿ ನೆರೆಯ ಕೆನ್ಯಕ್ಕೆ ಪರಾರಿಯಾಗಿದ್ದಾರೆ.

ಒರೊಮೊ ಜನಾಂಗೀಯ ಗುಂಪಿಗೆ ಸೇರಿದ ಪ್ರಧಾನಿ ಅಬಿಯ್ ಅಹ್ಮದ್ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಒರೊಮೊ ಮತ್ತು ಇತರ ಇತರ ಗುಂಪುಗಳ ನಡುವಿನ ಹಿಂಸಾಚಾರ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News