ನ್ಯೂಯಾರ್ಕ್ ನಲ್ಲಿ ಭಾರತ ಮೂಲದ ಮಹಿಳೆಯ ಮೇಲೆ ಹಲ್ಲೆ: ವ್ಯಕ್ತಿಯ ಬಂಧನ

Update: 2018-12-15 16:45 GMT

ನ್ಯೂಯಾರ್ಕ್, ಡಿ. 15: ನ್ಯೂಯಾರ್ಕ್ ನಗರದ ಕ್ವೀನ್ಸ್ ಬೋರೊದಲ್ಲಿ ಕಳೆದ ತಿಂಗಳು ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ ಭಾರತ ಮೂಲದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ದ್ವೇಷಾಪರಾಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

54 ವರ್ಷದ ಅಲ್ಲಾಶೀದ್ ಅಲ್ಲಾ ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

20 ವರ್ಷದ ಅವನೀತ್ ಕೌರ್ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಹಾಗೂ ಗಂಭೀರ ಪ್ರಮಾಣದ ಕಿರುಕುಳ ನೀಡಿದ ಆರೋಪವನ್ನು ಅವನ ಮೇಲೆ ಹೊರಿಸಲಾಗಿದೆ.

ಅವನ ವಿರುದ್ಧದ ಆರೋಪಗಳು ಸಾಬೀತಾದರೆ ಮೂರೂವರೆ ವರ್ಷಗಳಿಂದ 15 ವರ್ಷಗಳವರೆಗಿನ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News