ಪಶ್ಚಿಮ ಜೆರುಸಲೇಮ್‌ಗೆ ಇಸ್ರೇಲ್ ರಾಜಧಾನಿ ಮಾನ್ಯತೆ: ಆಸ್ಟ್ರೇಲಿಯ

Update: 2018-12-15 17:25 GMT

ಸಿಡ್ನಿ (ಆಸ್ಟ್ರೇಲಿಯ), ಡಿ. 15: ಪಶ್ಚಿಮ ಜೆರುಸಲೇಮನ್ನು ಇಸ್ರೇಲ್‌ನ ರಾಜಧಾನಿಯಾಗಿ ಆಸ್ಟ್ರೇಲಿಯ ಅಂಗೀಕರಿಸಿದೆ ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಶನಿವಾರ ಹೇಳಿದ್ದಾರೆ.

ಆದಾಗ್ಯೂ, ಶಾಂತಿ ಒಪ್ಪಂದ ಏರ್ಪಡುವವರೆಗೆ ಆಸ್ಟ್ರೇಲಿಯ ತನ್ನ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಮ್‌ಗೆ ಸ್ಥಳಾಂತರಿಸುವುದಿಲ್ಲ ಎಂದು ಅವರು ಹೇಳಿದರು.

ಅದೇ ವೇಳೆ, ಪೂರ್ವ ಜೆರುಸಲೇಮನ್ನು ರಾಜಧಾನಿಯಾಗಿ ಹೊಂದಿರುವ ಭವಿಷ್ಯದ ಫೆಲೆಸ್ತೀನ್ ದೇಶವನ್ನೂ ತಾನು ಮಾನ್ಯ ಮಾಡುವುದಾಗಿ ಮೊರಿಸನ್ ಹೇಳಿದ್ದಾರೆ.

ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಿದ್ದರು. ಬಳಿಕ ಕೆಲವು ದೇಶಗಳು ಈ ಮಾದರಿಯನ್ನು ಅನುಸರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News