ರವಿಶಾಸ್ತ್ರಿ-ಕೊಹ್ಲಿ ಪಾತ್ರ ವೌಲ್ಯಮಾಪನವಾಗಬೇಕು

Update: 2018-12-18 18:02 GMT

ಪರ್ತ್, ಡಿ.18: ಆಸ್ಟ್ರೇಲಿಯ ವಿರುದ್ಧದ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳನ್ನು ಭಾರತ ಒಂದು ವೇಳೆ ಗೆಲ್ಲಲು ವಿಫಲವಾದರೆ ತಂಡದ ಕೋಚ್ ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಸಾಮರ್ಥ್ಯ ಬಳಕೆಯ ಬಗ್ಗೆ ವೌಲ್ಯಮಾಪನ ನಡೆಯಬೇಕು ಎಂದು ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ತಂಡದ ನಿಯಂತ್ರಣ ಮಂಡಳಿಯ ‘ಆಯ್ಕೆಯಲ್ಲಿನ ದೋಷ’ ಗಳ ಬಗ್ಗೆ ಇತ್ತೀಚೆಗೆ ಅವರು ಅಸಮಾಧಾನಗೊಂಡಿದ್ದರು.

ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿರುವ ಅವರು ‘‘ಆಯ್ಕೆ ಸಮಿತಿ ಮಾಡುತ್ತಿರುವ ಪ್ರಮಾದಗಳನ್ನು ತಂಡವು ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿದ್ದಾಗಲೇ ನಾವು ನೋಡುತ್ತಿದ್ದೇವೆ. ಈ ಪ್ರಮಾದಗಳು ತಂಡ ಸೋಲುವ ಮೂಲಕ ಬೆಲೆ ತೆರುವಂತೆ ಮಾಡಿವೆ. ಒಂದು ವೇಳೆ ಆಯ್ಕೆ ಸೂಕ್ತವಾಗಿದ್ದರೆ ನಾವು ಪಂದ್ಯ ಗೆಲ್ಲುವುದು ಸಾಧ್ಯವಿತ್ತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News