ಹಿರಿಯ ಕಬಡ್ಡಿ ಪಟು ಅನೂಪ್‌ಕುಮಾರ್ ನಿವೃತ್ತಿ

Update: 2018-12-19 17:16 GMT

ಹೊಸದಿಲ್ಲಿ, ಡಿ.19: ಕಬಡ್ಡಿ ದಂತಕತೆ ಹಾಗೂ ಭಾರತದ ವಿಶ್ವಕಪ್ ವಿಜೇತ ತಂಡದ ನಾಯಕ ಅನೂಪ್ ಕುಮಾರ್ ಬುಧವಾರ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

 2006ರಲ್ಲಿ ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಆಡುವ ಮೂಲಕ ಅಂತರ್‌ರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ್ದ ಅನೂಪ್ ಪಂಚಕುಲದಲ್ಲಿ ಇಂದು ತನ್ನ ನಿವೃತ್ತಿ ನಿರ್ಧಾರ ಪ್ರಕಟಸಿದರು. ಪ್ರಸ್ತುತ ಅವರು ಕಬಡ್ಡಿ ಲೀಗ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಸುಮಾರು 15 ವರ್ಷಗಳ ಕಾಲ ಕಬಡ್ಡಿ ಆಡಿರುವ ಅನೂಪ್ ಹಲವು ಲೀಗ್ ತಂಡಗಳ ಗೆಲುವಿಗೆ ನಾಯಕತ್ವವಹಿಸಿದ್ದರು. ದೇಶದಲ್ಲಿ ಕ್ರೀಡೆ ಬೆಳೆಯಲು ಕಾಣಿಕೆ ನೀಡಿದ್ದರು.

2010 ಹಾಗೂ 2014ರಲ್ಲಿ ಭಾರತ ಕಬಡ್ಡಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಅನೂಪ್ ಪಾತ್ರವಿದೆ. 2014ರಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದರು.ಅನೂಪ್ ನಾಯಕತ್ವದಲ್ಲಿ ಭಾರತ ಏಶ್ಯನ್ ಗೇಮ್ಸ್‌ನಲ್ಲಿ 2 ಚಿನ್ನ ಹಾಗೂ 2016ರಲ್ಲಿ ಕಬಡ್ಡಿ ವಿಶ್ವಕಪ್‌ನ್ನು ಜಯಿಸಿತ್ತು.

 ಅನೂಪ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News