ತಂದೆಯಾದ ರೋಹಿತ್ ಶರ್ಮಾ

Update: 2018-12-31 08:36 GMT

ಮುಂಬೈ, ಡಿ.31: ಆಸ್ಟ್ರೇಲಿಯದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಜಯ ಗಳಿಸಿದ ಸಂಭ್ರದಲ್ಲಿದ್ದಾಗ ತಂಡದ ಅಗ್ರ ಸರದಿಯ ದಾಂಡಿಗ ರೋಹಿತ್ ಶರ್ಮಾರಿಗೆ  ಶುಭ ಸುದ್ದಿ ಲಭಿಸಿದೆ.

ರೋಹಿತ್ ಶರ್ಮಾ ಅವರು  ತಂದೆಯಾಗಿದ್ದಾರೆ. ರೋಹಿತ್ ಶರ್ಮಾ ಪತ್ನಿ ರಿತಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ   ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಗೊತ್ತಾದ ಬೆನ್ನಲ್ಲೇ ರೋಹಿತ್ ಶರ್ಮಾ ಅವರು ಪತ್ನಿ ಮತ್ತು ಮಗುವನ್ನು ನೋಡಲು ತವರಿಗೆ ವಾಪಸಾಗಿದ್ದಾರೆ. ರೋಹಿತ್ ಶರ್ಮಾ ಕಳೆದ ಟೆಸ್ಟ್ ನಲ್ಲಿ ಅರ್ಧಶತಕ ದಾಖಲಿಸಿದ್ದರು. ತವರಿಗೆ ವಾಪಸಾಗಿರುವ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರು ಜ.3ರಂದು ಆರಂಭವಾಗಲಿರುವ  ಆಸ್ಟ್ರೇಲಿಯ ವಿರುದ್ಧದ ಅಂತಿಮ ಟೆಸ್ಟ್ ಗೆ ಲಭ್ಯರಿಲ್ಲ. ಜ.8ರಂದು ಏಕದಿನ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆಂದು  ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News