ಚೇತೇಶ್ವರ ಪೂಜಾರ ಹೊಸ ದಾಖಲೆ

Update: 2019-01-03 08:19 GMT

ಸಿಡ್ನಿ, ಜ.3: ಟೆಸ್ಟ್ ಕ್ರಿಕೆಟ್‌ನ ಮೂರನೇ ಕ್ರಮಾಂಕದಲ್ಲಿ ಗರಿಷ್ಠ ಶತಕ(3)ಸಿಡಿಸಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ಹೊಸ ದಾಖಲೆ ನಿರ್ಮಿಸಿದರು.

ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 123 ರನ್ ಸಿಡಿಸಿದ ಪೂಜಾರ ಆ ಬಳಿಕ ಹಿಂತಿರುಗಿ ನೋಡಿಲ್ಲ. ಮೆಲ್ಬೋರ್ನ್‌ನಲ್ಲಿ ನಡೆದ 3ನೇ ಪಂದ್ಯದಲ್ಲಿ 106 ರನ್ ಗಳಿಸಿದ ಪೂಜಾರ ಗುರುವಾರ ಸಿಡ್ನಿಯಲ್ಲಿ ವೃತ್ತಿಜೀವನದ 68ನೇ ಪಂದ್ಯದಲ್ಲಿ 18ನೇ ಶತಕ ದಾಖಲಿಸಿದರು. ಪೂಜಾರ ಪ್ರಸಕ್ತ ಸರಣಿಯಲ್ಲಿ ಗರಿಷ್ಠ ಶತಕ ಸಿಡಿಸಿದ ಸಾಧನೆಯನ್ನೂ ಮಾಡಿದರು.

ಈಗ ನಡೆಯುತ್ತಿರುವ ಗವಾಸ್ಕರ್-ಬಾರ್ಡರ್ ಟ್ರೋಫಿಯಲ್ಲಿ 4 ಪಂದ್ಯಗಳ 7 ಇನಿಂಗ್ಸ್‌ಗಳಲ್ಲಿ 3ನೇ ಕ್ರಮಾಂಕದಲ್ಲಿ ಒಟ್ಟು 428 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News