ಪ್ರೊ ಕಬಡ್ಡಿ: 2ನೇ ಕ್ವಾಲಿಫೈಯರ್; ಗುಜರಾತ್ ಫಾರ್ಚೂನ್‌ಜೈಂಟ್ಸ್ ಫೈನಲ್‌ಗೆ
Update: 2019-01-03 21:56 IST
ಮುಂಬೈ, ಜ.3: ಆರನೇ ಆವೃತ್ತಿಯ ಪ್ರೊ ಕಬಡ್ಡಿಯ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು 38-31 ಅಂಕಗಳ ಅಂತರದಿಂದ ಮಣಿಸಿದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಜ.5ರಂದು ನಡೆಯುವ ಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ. ಇಲ್ಲಿಯ ಎಸ್‌ವಿಪಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿದ್ದಾಜಿದ್ದಿ ಹೋರಾಟದಲ್ಲಿ ವಿಜೇತ ಗುಜರಾತ್ ಪರ ಸಚಿನ್ ಒಟ್ಟು 10 ಅಂಕ ಗಳಿಸಿದರೆ, ಪ್ರಪಂಜನ್ ಮತ್ತು ರೋಹಿತ್ ತಲಾ 5 ಅಂಕ ಗಳಿಸಿದರು.
ಸೋತ ಯುಪಿ ಪರ ಶ್ರೀಕಾಂತ್ ಜಾಧವ್ ಅತ್ಯಧಿಕ 7 ಅಂಕ ಗಳಿಸಿದರೆ, ನಿತೇಶ್‌ಕುಮಾರ್ 6, ಪ್ರಶಾಂತ್‌ಕುಮಾರ್ ರೈ 5 ಅಂಕ ಗಳಿಸಿದರು.