ಪ್ರೊ ಕಬಡ್ಡಿ ಚಾಂಪಿಯನ್ ಆದ ಬೆಂಗಳೂರು

Update: 2019-01-05 15:57 GMT

ಮುಂಬೈ, ಜ.5: ಕೊನೆಯವರೆಗೂ ಹಾವು ಏಣಿ ಆಟದಂತೆ ಕಂಡುಬಂದ ಆರನೇ ಆವೃತ್ತಿಯ ಪ್ರೊ ಕಬಡ್ಡಿಲೀಗ್‌ನ ಫೈನಲ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್‌ನ್ನು ಬಗ್ಗುಬಡಿದ ಬೆಂಗಳೂರು ಬುಲ್ಸ್ ತಂಡ ಮೊದಲ ಬಾರಿ ಚಾಂಪಿಯನ್‌ಪಟ್ಟ ಧರಿಸಿ ಮೆರೆದಿದೆ.

ಇಲ್ಲಿನ ಎಸ್‌ವಿಪಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಗುಜರಾತ್‌ನ್ನು 38-33 ಅಂಕಗಳ ಅಂತರದಿಂದ ಮಣಿಸಿತು.

ಬೆಂಗಳೂರು ಪರ ಪವನ್‌ಕುಮಾರ್ ಅತ್ಯಧಿಕ 22 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು. ಗುಜರಾತ್ ಪರ ಸಚಿನ್ 10 ಅಂಕ ಗಳಿಸಿದರೆ, ಪ್ರಪಂಜನ್ ಹಾಗೂ ರೋಹಿತ್ ತಲಾ 5 ಅಂಕ ಗಳಿಸಿ ಮಿಂಚಿದರು.

ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡ ಗುಜರಾತ್‌ನ್ನು 41-29 ಅಂಕಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಗುಜರಾತ್ ತಂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಯುಪಿ ಯೋಧಾವನ್ನು ಮಣಿಸಿ ಫೈನಲ್‌ಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News