ಆಸ್ತ್ರೇಲಿಯಕ್ಕೆ ಫಾಲೋ ಆನ್ ವಿಧಿಸಿದ ಕೊಹ್ಲಿ ಪಡೆ
Update: 2019-01-06 10:31 IST
ಸಿಡ್ನಿ, ಜ.6: ಇಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಆಸ್ತ್ರೇಲಿಯ ಮೊದಲ ಇನಿಂಗ್ಸ್ ನಲ್ಲಿ 104.5 ಓವರ್ ಗಳಲ್ಲಿ 300 ರನ್ ಗಳಿಗೆ ಆಲೌಟಾಗಿದ್ದು, ಭಾರತ ಇದರೊಂದಿಗೆ 322 ರನ್ ಗಳ ಮುನ್ನಡೆ ಸಾಧಿಸಿದೆ.
ಟೆಸ್ಟ್ ನ ನಾಲ್ಕನೇ ದಿನವಾಗಿರುವ ರವಿವಾರ ಆಸ್ಟ್ರೇಲಿಯನ್ನು ಮೊದಲ ಇನಿಂಗ್ಸ್ ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಭಾರತ ಇದೀಗ ಆಸ್ತ್ರೇಲಿಯಕ್ಕೆ ಫಾಲೋ ಆನ್ ವಿಧಿಸಿದೆ.
ಅಂತಿಮ ವಿಕೆಟ್‌ಗೆ 42 ರನ್‌ಗಳ ಜತೆಯಾಟ ನೀಡಿದ ಜೋಶ್ ಹೇಝಲ್‌ವುಡ್ (21) ಹಾಗೂ ಮಿಚೆಲ್ ಸ್ಟಾರ್ಕ್ ( ಔಟಾಗದೆ 29) ಭಾರತವನ್ನು ಅಲ್ಪ ಕಾಡಿದರೂ , ಕೊನೆಗೂ ಹೇಝಲ್ ವುಡ್ ಅವರನ್ನು ಕುಲ್ ದೀಪ್ ಯಾದವ್ ಎಲ್ ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಆಸ್ತ್ರೇಲಿಯ ಆಲೌಟಾಯಿತು. ಯಾದವ್ 99ಕ್ಕೆ 5 ವಿಕೆಟ್ ಪಡೆದರು. ಮುಹಮ್ಮದ್ ಶಮಿ ಮತ್ತು ಜಡೇಜ ತಲಾ 2 ಮತ್ತು ಬುಮ್ರಾ 1 ವಿಕೆಟ್ ಪಡೆದರು.