ಎಎಫ್‌ಸಿ ಏಶ್ಯನ್ ಕಪ್: ಭಾರತಕ್ಕೆ ಐತಿಹಾಸಿಕ ಜಯ

Update: 2019-01-06 16:49 GMT

ಬಹರೈನ್,ಜ.6: ಹಿರಿಯ ಆಟಗಾರ ಸುನೀಲ್ ಚೆಟ್ರಿ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಥಾಯ್ಲೆಂಡ್ ತಂಡವನ್ನು 4-1 ಅಂತರದಿಂದ ಮಣಿಸಿದ ಭಾರತದ ಫುಟ್ಬಾಲ್ ತಂಡ ಎಎಫ್‌ಸಿ ಏಶ್ಯನ್ ಕಪ್‌ನಲ್ಲಿ ಐತಿಹಾಸಿಕ ಜಯ ದಾಖಲಿಸಿತು.

ಚೆಟ್ರಿ 27ನೇ ಹಾಗೂ 46ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಅನಿರುದ್ಧ ಥಾಪ(68ನೇ ನಿ.) ಹಾಗೂ ಜೇಜೆ ಲಾಲ್‌ಪೆಕುಲ್ವಾ(80ನೇ ನಿ.)ತಲಾ ಒಂದು ಗೋಲು ಬಾರಿಸಿ ಟೂರ್ನಿಯಲ್ಲಿ•ಭಾರತ 55 ವರ್ಷಗಳ ಬಳಿಕ ಮೊದಲ ಗೆಲುವು ದಾಖಲಿಸಲು ನೆರವಾದರು. ಇದು ಭಾರತದ ದೊಡ್ಡ ಅಂತರದ ಜಯವಾಗಿದೆ.

ಭಾರತ ಮುಂದಿನ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಲು ಸಮರ್ಥವಾದರೆ ನಾಕೌಟ್ ಹಂತಕ್ಕೆ ತೇರ್ಗಡೆಯಾಗುತ್ತದೆ.

ಭಾರತ ಮುಂದಿನ ಪಂದ್ಯಗಳಲ್ಲಿ ಯುಎಇ ಹಾಗೂ ಬಹರೈನ್ ತಂಡವನ್ನು ಎದುರಿಸಲಿದೆ.

27ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ಚೆಟ್ರಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಪರಾಜಿತ ಥಾಯ್ಲೆಂಡ್ ಪರ ಟೀರಾಸಿಲ್ ಥಾಂಗ್ಡಾ 33ನೇ ನಿಮಿಷದಲ್ಲಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್‌ರನ್ನು ವಂಚಿಸಿ ಗೋಲು ಬಾರಿಸಿ 1-1 ಸಮಬಲಗೊಳಿಸಿದರು. ಅನಿರುದ್ಧ ಹಾಗೂ ಬದಲಿ ಆಟಗಾರ ಜೇಜೆ ಭಾರತದ ಇನ್ನೆರಡು ಗೋಲು ಬಾರಿಸಿ ಭರ್ಜರಿ ಜಯ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News