ಟೀಮ್ ಇಂಡಿಯಾದ ಕುರಿತು ತಪ್ಪು ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಪ್ರೀತಿ
ಹೊಸದಿಲ್ಲಿ, ಜ.7: ಆಸ್ಟ್ರೇಲಿಯದಲ್ಲಿ ಭಾರತ ತಂಡ 2-1 ಅಂತರದಿಂದ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಪ್ರೀತಿ ಝಿಂಟಾ ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಮ್ ಇಂಡಿಯಾದ ಸದಸ್ಯರಿಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಂದೇಶ ಕಳುಹಿಸಿದರು.
ಐಪಿಎಲ್‌ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಮಾಲಕಿ ಪ್ರೀತಿ ತಪ್ಪು ಟ್ವೀಟ್ ಮಾಡಿ ಪೇಚಿಗೆ ಸಿಲುಕಿದರು. ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ತಕ್ಷಣವೇ ತಪ್ಪು ಪತ್ತೆ ಹಚ್ಚಿ ಬಾಲಿವುಡ್ ನಟಿಗೆ ಟ್ರಾಲ್ ಮಾಡಿದರು.
‘‘ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಏಶ್ಯದ ಮೊದಲ ತಂಡ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು’’ ಎಂದು ಪ್ರೀತಿ ಟ್ವೀಟ್ ಮಾಡಿದ್ದರು.
ಪ್ರೀತಿಗೆ ಭಾರತ ತಂಡ ಆಸ್ಟ್ರೇಲಿಯದಲ್ಲಿ ಪಂದ್ಯ ಗೆದ್ದ ಮೊದಲ ಏಶ್ಯ ತಂಡವಲ್ಲ. ಬದಲಿಗೆ ಸರಣಿ ಗೆದ್ದ ಮೊದಲ ಏಶ್ಯ ತಂಡ ಎಂಬ ವಿಚಾರ ಗೊತ್ತಿರಲಿಲ್ಲ.
ಕೆಲವು ಅಭಿಮಾನಿಗಳು ಪ್ರೀತಿ ಝಿಂಟಾರ ತಪ್ಪು ಟ್ವೀಟ್ ಸರಿಪಡಿಸಿ, ಭಾರತ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆದ್ದ ಏಶ್ಯದ ಮೊದಲ ತಂಡ ಎಂದು ರೀ ಟ್ವೀಟ್ ಮಾಡಿದ್ದಾರೆ