ರಾಜಸ್ಥಾನಕ್ಕೆ ಇನಿಂಗ್ಸ್ ಹಾಗೂ 77 ರನ್‌ಗಳ ಜಯ
Update: 2019-01-08 23:38 IST
ಅಗರ್ತಲಾ, ಜ.8: ರಣಜಿ ‘ಸಿ’ ಗುಂಪಿನ ಪಂದ್ಯದಲ್ಲಿ ತ್ರಿಪುರ ತಂಡವನ್ನು ಇನಿಂಗ್ಸ್ ಹಾಗೂ 77 ರನ್‌ಗಳ ಭಾರೀ ಅಂತರದಿಂದ ಸೋಲಿಸಿದ ರಾಜಸ್ಥಾನ ಗಮನ ಸೆಳೆದಿದೆ.
ಇಲ್ಲಿಯ ವೀರ್ ವಿಕ್ರಮ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ತ್ರಿಪುರ ಅನಿಕೇತ್ ಚೌಧರಿ(11ಕ್ಕೆ5) ಹಾಗೂ ಹಕ್ (1ಕ್ಕೆ3)ದಾಳಿಗೆ ಸಿಲುಕಿ ಪ್ರ.ಇನಿಂಗ್ಸ್ ನಲ್ಲಿ ಕೇವಲ 35 ರನ್‌ಗೆ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಇದಕ್ಕುತ್ತರವಾಗಿ ತನ್ನ ಮೊದಲ ಇನಿಂಗ್ಸ್ ನಲ್ಲಿ ರಾಜಸ್ಥಾನ ತಂಡ 218 ರನ್ ಗಳಿಸಿ ಆಲೌಟ್ ಆಗಿತ್ತು. ಟಿಎಮ್‌ವುಲ್ ಹಕ್(37) ಅಗ್ರ ಸ್ಕೋರರ್ ಎನಿಸಿದ್ದರು. ತನ್ನ ಪಾಲಿನ ಎರಡನೇ ಇನಿಂಗ್ಸ್ ಆರಂಭಿಸಿದ ತ್ರಿಪುರ 106 ರನ್‌ಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ದೀಪಕ್ ಚಹಾರ್ 5 ವಿಕೆಟ್ ಕಬಳಿಸಿದರೆ, ಹಕ್ ಹಾಗೂ ಅನಿಕೇತ್ ತಲಾ 2 ವಿಕೆಟ್ ಉರುಳಿಸಿದರು. ಅಂತಿಮವಾಗಿ ತ್ರಿಪುರ ಇನಿಂಗ್ಸ್ ಹಾಗೂ 77 ರನ್‌ಗಳ ಭಾರೀ ಅಂತರದಿಂದ ಜಯಿಸಿತು.