×
Ad

ಮಂಡಳಿ ಅಧ್ಯಕ್ಷರ ಇಲೆವೆನ್‌ಗೆ ಇಶಾನ್ ನಾಯಕ

Update: 2019-01-14 23:49 IST

ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ

ಹೊಸದಿಲ್ಲಿ, ಜ.14: ತಿರುವನಂತ ಪುರದಲ್ಲಿ ಜ.18-20 ರವರೆಗೆ ನಡೆಯುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ತ್ರಿದಿನ ಅಭ್ಯಾಸ ಪಂದ್ಯಕ್ಕೆ ಬಿಸಿಸಿಐ ಅಧ್ಯಕ್ಷರ ಇಲೆವೆನ್ ತಂಡವನ್ನು ಪ್ರಕಟಿಸಲಾಗಿದ್ದು, ಜಾರ್ಖಂಡ್ ವಿಕೆಟ್ ಕೀಪರ್ ದಾಂಡಿಗ ಇಶಾನ್ ಕಿಶನ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಈ ಕುರಿತು ಬಿಸಿಸಿಐ, ‘ರಣಜಿ ಟ್ರೋಫಿಯಲ್ಲಿ ಸದ್ಯ ಭಾಗವಹಿಸಿರುವ ಆಟಗಾರರನ್ನು ಆಯ್ಕೆಗೆ ಪರಿಗಣಿಸಿಲ್ಲ’ಎಂದು ಹೇಳಿದೆ.

ಜಾರ್ಖಂಡ್ ಎಡಗೈ ಸ್ಪಿನ್ನರ್ ಪಪ್ಪು ರಾಯ್, ಮುಂಬೈ ವೇಗದ ಬೌಲರ್ ತುಷಾರ್ ದೇಶಪಾಂಡೆ, ಆಂಧ್ರ ದಾಂಡಿಗ ರಿಕಿ ಭುಯಿ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News