ಫೆಡರರ್, ನಡಾಲ್, ಸಿಲಿಕ್ ಮೂರನೇ ಸುತ್ತಿಗೆ ಪ್ರವೇಶ

Update: 2019-01-16 18:12 GMT

ಮೆಲ್ಬೋರ್ನ್,ಜ.16: ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ನಲ್ಲಿ ಹಾಲಿ ಚಾಂಪಿಯನ್ ರೋಜರ್ ಫೆಡರರ್, ಹಿರಿಯ ಆಟಗಾರ ರಫೆಲ್ ನಡಾಲ್ ಹಾಗೂ ಮರಿನ್ ಸಿಲಿಕ್ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

► ಫೆಡರರ್‌ಗೆ ಗೆಲುವು: ಹಾಲಿ ಚಾಂಪಿಯನ್ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಸತತ ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿರುವ ಫೆಡರರ್ ಬುಧವಾರ ಇಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಕ್ವಾಲಿಫೈಯರ್ ಡ್ಯಾನ್ ಇವನ್ ್ಸರನ್ನು 7-6(5), 7-6(3), 6-3 ಸೆಟ್‌ಗಳಿಂದ ಸೋಲಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಡೆನಿಸ್ ಇಸ್ಟೊಮಿನ್‌ರನ್ನು ಮಣಿಸಿದ್ದ 3ನೇ ಶ್ರೇಯಾಂಕದ ಫೆಡರರ್ ವಿಶ್ವದ 189ನೇ ರ್ಯಾಂಕಿನ ಆಟಗಾರ ಇವನ್ಸ್‌ರಿಂದ ತೀವ್ರ ಪ್ರತಿರೋಧ ಎದುರಿಸಿದರು. ಎರಡನೇ ಸೆಟ್‌ನಲ್ಲಿ ಫೆಡರರ್‌ರನ್ನು ಟೈ-ಬ್ರೇಕ್‌ನತ್ತ ಒಯ್ದರು. ರಾಡ್ ಲಾವೆರ್ ಅರೆನಾದಲ್ಲಿ ಅದ್ಭುತ ಹಿಡಿತವಿರುವ ಫೆಡರರ್ ಮೂರನೇ ಸೆಟ್‌ನ್ನು 6-3 ಅಂತರದಿಂದ ಜಯಿಸಿ ಮುಂದಿನ ಸುತ್ತಿಗೇರಿದರು. ಸ್ವಿಸ್ ಸೂಪರ್‌ಸ್ಟಾರ್ ಫೆಡರರ್ ಮುಂದಿನ ಸುತ್ತಿನಲ್ಲಿ ಗಾಯೆಲ್ ಮೊಫಿಲ್ಸ್ ಅಥವಾ ಟೇಲರ್ ಫ್ರಿಟ್ಜ್‌ರನ್ನು ಎದುರಿಸಲಿದ್ದಾರೆ.

ಆರನೇ ಶ್ರೇಯಾಂಕದ ಹಾಗೂ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ ಮರಿನ್ ಸಿಲಿಕ್ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಅಮೆರಿಕದ ಮಕೆಂಝಿ ಮೆಕ್‌ಡೊನಾಲ್ಡ್‌ರನ್ನು 4 ಸೆಟ್‌ಗಳ ಅಂತರದಿಂದ ಸದೆ ಬಡಿದರು. ಕ್ರೊಯೇಶಿ ಯದ ಸಿಲಿಕ್3 ಗಂಟೆ, 37 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ 23ರ ಹರೆಯದ ಮೆಕ್‌ಡೊನಾಲ್ ್ಡರನ್ನು 7-5, 6-7(9/11), 6-4, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ವರ್ಷದ ಹಿಂದೆ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ನಡೆದ ಐದು ಸೆಟ್‌ಗಳ ಪಂದ್ಯದಲ್ಲಿ ಸೋತಿದ್ದ ಮಾಜಿ ಯುಎಸ್ ಓಪನ್ ಚಾಂಪಿಯನ್ ಸಿಲಿಕ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊ ಅಥವಾ ಮಾಲ್ಡೊವಾದ ರಾಡು ಅಲಿಬೊಟ್‌ರನ್ನು ಎದುರಿಸಲಿದ್ದಾರೆ.

ಆ್ಯಂಡರ್ಸನ್ ಔಟ್

ಆಸ್ಟ್ರೇಲಿಯನ್ ಓಪನ್‌ನ ಐದನೇ ಶ್ರೇಯಾಂಕದ ಆಟಗಾರ ಕೆವಿನ್ ಆ್ಯಂಡರ್ಸನ್ ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಫ್ರಾನ್ಸಿಸ್ ಟಿಫಾಯ್ ದಕ್ಷಿಣ ಆಫ್ರಿಕದ ಆ್ಯಂಡರ್ಸನ್ ವಿರುದ್ಧ 4-6, 6-4, 6-4, 7-5 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ನಾಲ್ಕು ಸೆಟ್‌ಗಳ ಪಂದ್ಯದ ನಡುವೆ ಗಾಯಗೊಂಡು ವೈದ್ಯಕೀಯ ಉಪಚಾರ ಪಡೆದ ವಿಂಬಲ್ಡನ್ ಟೂರ್ನಿಯ ಫೈನಲಿಸ್ಟ್ ಆ್ಯಂಡರ್ಸನ್ ಈ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೋತು ಬೇಗನೇ ನಿರ್ಗಮಿಸುತ್ತಿರುವ ಅಗ್ರ ರ್ಯಾಂಕಿನ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವದ 39ನೇ ರ್ಯಾಂಕಿನ ಅಮೆರಿಕದ ಆಟಗಾರ ಟಿಫಾಯ್ ಮೂರನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಆ್ಯಂಡ್ರಿಯ್ ಸೆಪ್ಪಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News