ನಡಾಲ್ ಮೂರನೇ ಸುತ್ತಿಗೆ

Update: 2019-01-16 18:16 GMT

ಮೆಲ್ಬೋರ್ನ್, ಜ.16: ತಾನಾಡಿದ ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಎಬ್ಡೆನ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್ ತಾರೆ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ತಮ್ಮ 18ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯತ್ತ ದಾಪುಗಾಲಿಟ್ಟಿದ್ದಾರೆ.

32 ವರ್ಷದ ನಡಾಲ್ 31 ವರ್ಷದ ಎಬ್ಡೆನ್ ಅವರನ್ನು 6-3, 6-2, 6-2 ನೇರ ಸೆಟ್‌ಗಳಿಂದ ಸೋಲಿಸಿದರು. ತವರಿನ ಪ್ರೇಕ್ಷಕರ ಭಾರೀ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಎಬ್ಡೆನ್ ಆರಂಭದಲ್ಲಿ ಅಲ್ಪ ಪ್ರತಿರೋಧ ತೋರಿದರೂ ಸೋಲು ತಪ್ಪಿಸಲಾಗಲಿಲ್ಲ. ಪ್ರಥಮ ಸೆಟ್‌ನಲ್ಲಿ 3-2 ಗೇಮ್‌ಗಳಿಂದ ಮುನ್ನಡೆಯಲ್ಲಿದ್ದ ಎಬ್ಡೆನ್ ಅವರನ್ನು ಸತತ ನಾಲ್ಕು ಗೇಮ್‌ಗಳಿಂದ ಹಿಂದಿಕ್ಕಿದ ನಡಾಲ್, 35 ನಿಮಿಷಗಳಲ್ಲಿ ಕೊನೆಗೊಂಡ ಪ್ರಥಮ ಸೆಟ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಈ ಮೂಲಕ ನಡಾಲ್ ಅಂತಿಮ-32ರಲ್ಲಿ ಸ್ಥಾನ ಪಡೆದರು. ಪಾದದ ನೋವಿನಿಂದ 2018ರ ಋತುವನ್ನು ಅರ್ಧದಲ್ಲೇ ಕೊನೆಗೊಳಿಸಿದ್ದ ಅವರು ಈ ಪಂದ್ಯವನ್ನು 116 ನಿಮಿಷಗಳಲ್ಲಿ ಮುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News