×
Ad

ರೂಶ್ ಕಲಾರಿಯಾಗೆ ಹ್ಯಾಟ್ರಿಕ್ ವಿಕೆಟ್,

Update: 2019-01-16 23:54 IST

ವಯನಾಡ್, ಜ.16: ಎಡಗೈ ವೇಗದ ಬೌಲರ್ ರೂಶ್ ಕಲಾರಿಯಾ ಅವರ ಅಮೋಘ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಗುಜರಾತ್ ತಂಡ ಕೇರಳ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವಿಗೆ 195 ರನ್‌ಗಳ ಗುರಿ ಪಡೆದಿದೆ.

ಪ್ರಥಮ ಇನಿಂಗ್ಸ್‌ನಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದ ಗುಜರಾತ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕೇರಳವನ್ನು 171 ರನ್‌ಗಳಿಗೆ ನಿಯಂತ್ರಿಸಿತು.

ರೂಶ್ ಕಲಾರಿಯಾ(36ಕ್ಕೆ3) ಹಾಗೂ ಅಕ್ಷರ್ ಪಟೇಲ್ (40ಕ್ಕೆ3) ಗುಜರಾತ್ ಪರ ಬೌಲಿಂಗ್‌ನಲ್ಲಿ ಮಿಂಚಿದರು.

ಕೇರಳದ ದ್ವಿತೀಯ ಇನಿಂಗ್ಸ್‌ನ 52ನೇ ಓವರ್‌ನ 5 ಹಾಗೂ 6ನೇ ಎಸೆತದಲ್ಲಿ ಕ್ರಮವಾಗಿ ಸಿಜೊಮನ್ ಜೋಸೆಫ್ ಹಾಗೂ ಥಂಪಿ ವಿಕೆಟ್ ಪಡೆದ ಗುಜರಾತ್ ಬೌಲರ್ ಕಲಾರಿಯಾ, 54ನೇ ಓವರ್‌ನ ಪ್ರಥಮ ಎಸೆತದಲ್ಲಿ ನಿಧೀಶ್‌ರ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News