ರಣಜಿ: ಸೌರಾಷ್ಟ್ರ, ವಿದರ್ಭ ಸೆಮಿ ಫೈನಲ್ ಪ್ರವೇಶ

Update: 2019-01-19 18:05 GMT

ಲಕ್ನೋ, ಜ.19: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹರ್ವಿಕ್ ದೇಸಾಯಿ ಸಿಡಿಸಿದ ಚೊಚ್ಚಲ ಶತಕದೊಂದಿಗೆ ಸೌರಾಷ್ಟ್ರ ತಂಡ ರಣಜಿ ಇತಿಹಾಸದಲ್ಲೇ ಅಧಿಕ ಮೊತ್ತ ಚೇಸ್ ಮಾಡಿ ಉತ್ತರಪ್ರದೇಶ ತಂಡವನ್ನು ಸೋಲಿಸಿ ಶನಿವಾರ ಸೆಮಿಫೈನಲ್ ತಲುಪಿತು. 372 ರನ್‌ಗಳ ಗೆಲುವಿನ ಗುರಿ ಪಡೆದಿದ್ದ ಸೌರಾಷ್ಟ್ರ ತಂಡ ಹರ್ವಿಕ್(116, 259 ಎಸೆತ, 16 ಬೌಂಡರಿ) ನೆರವಿನೊಂದಿಗೆ 6 ವಿಕೆಟ್‌ಗಳ ಸುಲಭದ ಜಯ ಸಾಧಿಸಿತು. ಹರ್ವಿಕ್ ಅಲ್ಲದೆ ಸ್ನೆಲ್ ಪಟೇಲ್(72), ರಾಷ್ಟ್ರೀಯ ಆಟಗಾರ ಚೇತೇಶ್ವರ ಪೂಜಾರ(ಅಜೇಯ 67), ಶೆಲ್ಡನ್ ಜಾಕ್ಸನ್(ಅಜೇಯ 73) ಅರ್ಧಶತಕ್ಗಳ ಕೊಡುಗೆ ನೀಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.

ಪಂದ್ಯದ ಕೊನೆಯ ದಿನವಾದ ಶನಿವಾರ ತನ್ನ ಎರಡನೇ ಇನಿಂಗ್ಸ್ ನ್ನು 195 ರನ್‌ಗೆ 2 ವಿಕೆಟ್‌ಗಳಿಂದ ಸೌರಾಷ್ಟ್ರ ಮುಂದುವರಿಸಿತು. ಈ ಹಂತದಲ್ಲಿ ನೈಟ್ ವಾಚ್‌ಮನ್ ಆಗಿ ಕಣಕ್ಕಿಳಿದಿದ್ದ ಕಮಲೇಶ್ ಮಕ್ವಾನಾ ಬೇಗನೆ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿದರು. ತಂಡದ ಗೆಲುವಿಗೆ 136 ರನ್ ಅಗತ್ಯವಿದ್ದಾಗ ಹರ್ವಿಕ್ ವಿಕೆಟ್ ಒಪ್ಪಿಸಿದರು. ಆಗ ಉತ್ತರಪ್ರದೇಶ ಪಾಳಯದಲ್ಲಿ ಗೆಲುವಿನ ವಿಶ್ವಾಸ ಗರಿಗೆದರಿತ್ತು. ಆದರೆ ಮನಮೋಹಕವಾಗಿ ಬ್ಯಾಟ್ ಬೀಸಿದ ಜಾಕ್ಸನ್ ಹಾಗೂ ಪೂಜಾರ ಸೌರಾಷ್ಟ್ರವನ್ನು ಗೆಲುವಿನ ದಡ ಸೇರಿಸುವಲ್ಲಿ ತಪ್ಪು ಮಾಡಲಿಲ್ಲ. ಹರ್ವಿಕ್ ದೇಸಾಯಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

2008-09ರ ಸಾಲಿನ ರಣಜಿ ಪಂದ್ಯದಲ್ಲಿ ಅಸ್ಸಾಂ ತಂಡ ಸರ್ವಿಸಸ್ ವಿರುದ್ಧ 371 ರನ್‌ಗಳ ಗುರಿ ನೀಡಿತ್ತು. ಈ ಸವಾಲನ್ನು ಸರ್ವಿಸಸ್ ಚೇಸ್ ಮಾಡಿ ದಾಖಲೆ ಬರೆದಿತ್ತು. ಸದ್ಯ ಈ ದಾಖಲೆಯನ್ನು ಸೌರಾಷ್ಟ್ರ ತಂಡ ಮುರಿದಿದೆ. ಸೌರಾಷ್ಟ್ರ ತನ್ನ ಸೆಮಿೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News