ಫೆಡರರ್ ಭೇಟಿಯಾದ ವಿರಾಟ್ ಕೊಹ್ಲಿ

Update: 2019-01-19 18:10 GMT

ಮೆಲ್ಬೋರ್ನ್, ಜ.19: ಇಷ್ಟು ದಿನ ಕ್ರಿಕೆಟ್ ಗುಂಗಿನಲ್ಲಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶನಿವಾರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್ ಅವರ ಟೆನಿಸ್ ಪಂದ್ಯವನ್ನು ವೀಕ್ಷಿಸಿ ನಿರಾಳರಾದರು. ಇದೇ ಸಂದರ್ಭದಲ್ಲಿ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್‌ರನ್ನು ಭೇಟಿಯಾದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಮತ್ತೊಂದು ಐತಿಹಾಸಿಕ ಸರಣಿ ಗೆಲ್ಲಲು ತಂಡದ ನೇತೃತ್ವ ವಹಿಸಿದ್ದ ಕೊಹ್ಲಿ ಪ್ರಸ್ತುತ ಮೆಲ್ಬೋರ್ನ್ ನಲ್ಲಿದ್ದು, ಶನಿವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಟೆನಿಸ್ ಟೂರ್ನಿ ವೀಕ್ಷಿಸಲು ತೆರಳಿದರು. ವಿಶ್ವದ ನಂ.1 ತಂಡ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯವನ್ನು 2-1 ಅಂತರದಿಂದ ಮಣಿಸಿ ಇತಿಹಾಸ ನಿರ್ಮಿಸಿತ್ತು. ಏಕದಿನ ಕ್ರಿಕೆಟ್ ಸರಣಿಯಲ್ಲೂ 2-1 ಅಂತರದಿಂದ ಜಯ ಸಾಸಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಅದರದೇ ನೆಲದಲ್ಲಿ ಮೊತ್ತ ಮೊದಲ ಸರಣಿ ಜಯಿಸಿತು. ಪತ್ನಿ ಅನುಷ್ಕಾ ಶರ್ಮಾರೊಂದಿಗೆ ೆಡರರ್‌ರನ್ನು ಭೇಟಿಯಾದ ಕೊಹ್ಲಿ ಅವರೊಂದಿಗೆ ೆಟೊಕ್ಕೆ ಪೋಸ್ ನೀಡಿದರು. ವಿಶ್ವದ ನಂ.1 ರ್ಯಾಂಕಿನ ಜೊಕೊವಿಕ್ ಹಾಗೂ ಕೆನಡಾದ ಶಪೊಲೊವ್ ಮಧ್ಯೆ ನಡೆದ ಮೂರನೇ ಸುತ್ತಿನ ಪಂದ್ಯವನ್ನು ರಾಡ್ ರೊವೆರ್‌ನ ವಿಐಪಿ ವಿಭಾಗದಲ್ಲಿ ಕುಳಿತು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News