ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವೆ: ಕಮಲಾ ಹ್ಯಾರಿಸ್ ಘೋಷಣೆ

Update: 2019-01-21 17:28 GMT

ವಾಶಿಂಗ್ಟನ್, ಜ. 21: ಮೊದಲ ಬಾರಿಯ ಸೆನೆಟರ್ ಹಾಗೂ ಕ್ಯಾಲಿಫೋರ್ನಿಯದ ಮಾಜಿ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.

ಅವರು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ, ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರು ಹಾಗೂ ಎರಡನೇ ಆಫ್ರಿಕನ್ ಅಮೆರಿಕನ್ ಆಗಲಿದ್ದಾರೆ.

ವಲಸಿಗ ದಂಪತಿಯ ಪುತ್ರಿಯಾಗಿರುವ 54 ವರ್ಷದ ಕಮಲಾ ಕ್ಯಾಲಿಫೋರ್ನಿಯದ ಓಕ್‌ಲ್ಯಾಂಡ್‌ನಲ್ಲಿ ಬೆಳೆದವರು.

ಅವರು ತನ್ನ ಸ್ಪರ್ಧೆಯನ್ನು ಎಬಿಸಿ ಚಾನೆಲ್‌ನ ‘ಗುಡ್ ಮಾರ್ನಿಂಗ್ ಅಮೆರಿಕ’ ಕಾರ್ಯಕ್ರಮದಲ್ಲಿ ಘೋಷಿಸಿದರು.

‘‘ನಾನು ಅಮೆರಿಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ ಹಾಗೂ ಅದರ ಬಗ್ಗೆ ನಾನು ರೋಮಾಂಚಿತನಾಗಿದ್ದೇನೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News