ಭಾರತ-ಕಿವೀಸ್ ಏಕದಿನ ಪಂದ್ಯವನ್ನು ಅರ್ಧಗಂಟೆ ನಿಲ್ಲಿಸಿದ ಸೂರ್ಯ!
ನೇಪಿಯರ್, ಜ.23: ಭಾರತ-ನ್ಯೂಝಿಲೆಂಡ್ ಮಧ್ಯೆ ಮೆಕ್‌ಲಿಯಾನ್ ಪಾರ್ಕ್‌ನಲ್ಲಿ ಬುಧವಾರ ನಡೆದ ಮೊದಲ ಏಕದಿನ ಪಂದ್ಯ ಸೂರ್ಯನ ಬೆಳಕಿನಿಂದಾಗಿ ಸ್ವಲ್ಪ ಕಾಲ ಸ್ಥಗಿತಗೊಂಡ ಅಪರೂಪದ ಘಟನೆ ನಡೆದಿದೆ.
ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ಡಕ್‌ವರ್ತ್ -ಲೂಯಿಸ್ ನಿಯಮ ಅಳವಡಿಸುವುದು ಹೊಸತೇನಲ್ಲ. ಆದರೆ, ಭಾರತ-ಕಿವೀಸ್ ನಡುವಿನ ಪಂದ್ಯದಲ್ಲಿ ಸೂರ್ಯ ಬ್ಯಾಟ್ ್ಸಮನ್‌ಗೆ ಅಡ್ಡಿಪಡಿಸಿದ ಕಾರಣದಿಂದ ಪಂದ್ಯವನ್ನು ಅರ್ಧಗಂಟೆ ನಿಲ್ಲಿಸಬೇಕಾಯಿತಲ್ಲದೆ ಡಿಎಲ್ ನಿಯಮದನ್ವಯ ಪಂದ್ಯದಒಂದು ಓವರ್‌ಗೆ ಕಡಿತಗೊಳಿಸಿ ಗುರಿಯನ್ನು ಪರಿಷ್ಕೃರಿಸಲಾಯಿತು.
"ನನ್ನ ಜೀವನದಲ್ಲಿ ಇಂತಹದ್ದನ್ನು ನೋಡಿಲ್ಲ. ಇದೊಂದು ತಮಾಷೆಯ ವಿಚಾರ. 2014ರಲ್ಲಿ ನಾನು ಸೂರ್ಯನ ಕಿರಣ ಕಣ್ಣಿಗೆ ಕುಕ್ಕಿದ ಕಾರಣ ಔಟಾಗಿದ್ದೆ. ಆಗ ಇಂತಹ ನಿಯಮ ಇರಲಿಲ್ಲ'' ಎಂದು ಅರ್ಧಗಂಟೆ ಪಂದ್ಯ ವ್ಯರ್ಥವಾಗಿರುವ ಕುರಿತು ಕೊಹ್ಲಿ ಪ್ರತಿಕ್ರಿಯಿಸಿದರು.
"ಆಟಗಾರರ ಹಿತದೃಷ್ಟಿಯಿಂದ ಇಂತಹ ನಿರ್ಧಾರ ಕೈಗೊಳ್ಳಲಾಯಿತು. ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯನ ಕಿರಣ ಬ್ಯಾಟ್ಸ್‌ಮನ್ ಕಣ್ಣಿಗೆ ಕುಕ್ಕುತ್ತಿತ್ತು. ಅಂಪೈರ್ ಆಗಿ ಆಟಗಾರರ ಸುರಕ್ಷತೆ ಬಗ್ಗೆ ಯೋಚಿಸಬೇಕಾಗುತ್ತದೆ. ಈ ಕುರಿತು ಮನವಿ ಸಲ್ಲಿಸದ ಆಟಗಾರರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ" ಎಂದು ಅಂಪೈರ್ ಶಾನ್ ಜಾರ್ಜ್ ಹೇಳಿದ್ದಾರೆ.
ಇಂಗ್ಲೆಂಡ್‌ನ ಕೆಲವು ದೇಶಿಯ ಕ್ರಿಕೆಟ್ ಮೈದಾನಗಳಲ್ಲಿ ಸೂರ್ಯನಿಂದಾಗಿ ಪಂದ್ಯ ಸ್ಥಗಿತ ಗೊಂಡಿದ್ದು, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವರೆಗೆ ಇಂತಹ ಘಟನೆ ನಡೆದಿಲ್ಲ. ಸಾಮಾನ್ಯವಾಗಿ ಕ್ರಿಕೆಟ್ ಪಿಚ್‌ಗಳು ಉತ್ತರ-ದಕ್ಷಿಣ ದಿಕ್ಕಿಗೆ ಮುಖ ಮಾಡಿರುತ್ತವೆ. ಆದರೆ, ಮೆಕ್‌ಲಿಯಾನ್ ಪಾರ್ಕ್ ಪಿಚ್ ಪೂರ್ವ-ಪಶ್ಚಿಮ ದಿಕ್ಕಿಗೆ ಮುಖ ಮಾಡಿದೆ.