ಡಯಾನಾ ಮುಡಿಗೆ ಥಾಯ್ಲೆಂಡ್ ಓಪನ್ ಕಿರೀಟ
Update: 2019-02-03 23:27 IST
ಹು ಹಿನ್(ಥಾಯ್ಲೆಂಡ್), ಫೆ.3: ಪ್ರಬಲ ಹೋರಾಟ ಕಂಡುಬಂದ ಥಾಯ್ಲೆಂಡ್ ಓಪನ್ ಟೆನಿಸ್ ಫೈನಲ್ ಪಂದ್ಯದಲ್ಲಿ ರವಿವಾರ ಆಸ್ಟ್ರೇಲಿಯದ ಅಜ್ಲಾ ಟಾಮ್ಲ್ ಜಾನೊವಿಕ್ ಅವರನ್ನು 6-2, 2-6, 7-6(7-3) ಸೆಟ್‌ಗಳಿಂದ ಮಣಿಸಿದ ಉಕ್ರೇನ್‌ನ ಡಯಾನಾ ಯೆಸ್ತರ್‌ಮಸ್ಕಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಸಾಗರನಗರಿ ಹು ಹಿನ್‌ನಲ್ಲಿ ಕೊನೆಯವರೆಗೂ ರೋಮಾಂಚನ ಉಳಿಸಿಕೊಂಡ ಪಂದ್ಯದಲ್ಲಿ 18 ವರ್ಷದ ಡಯಾನಾ ತನ್ನ ಎರಡನೇ ಡಬ್ಲುಟಿಎ ಟ್ರೋಫಿಗೆ ಮುತ್ತಿಕ್ಕಿದರು. ಪ್ರಥಮ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಡಯಾನಾ, ಎರಡನೇ ಸೆಟ್‌ನಲ್ಲಿ 25 ವರ್ಷದ ಎದುರಾಳಿ ಅಜ್ಲಾ ಅವರಿಂದ ಅಷ್ಟೇ ಅಂತರದಲ್ಲಿ ಸೋಲು ಅನುಭವಿಸಿದರು. ಟೈಬ್ರೇಕರ್‌ವರೆಗೂ ಸಾಗಿದ ಕೊನೆಯ ಸೆಟ್‌ನಲ್ಲಿ ಕೊನೆಗೂ ಡಯಾನಾ ಗೆಲುವಿನ ನಗೆ ಬೀರಿದರು.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಡಯಾನಾ ಅಗ್ರಶೇಯಾಂಕದ ಸ್ಪೇನ್‌ನ ಗಾರ್ಬೈನ್ ಮುಗುರುಝಾ ಅವರಿಗೆ ಮಣ್ಣು ಮುಕ್ಕಿಸಿದ್ದರು.