ಕಿಕಿ ಬೆರ್ಟೆನ್ಸ್‌ಗೆ ಸೈಂಟ್ ಪೀಟರ್‌ಬರ್ಗ್ ಪ್ರಶಸ್ತಿ
Update: 2019-02-04 23:38 IST
ಸೈಂಟ್ ಪೀಟರ್‌ಬರ್ಗ್, ಫೆ.4: ಡಚ್‌ನ ಎರಡನೇ ಶ್ರೇಯಾಂಕದ ಆಟಗಾರ್ತಿ ಕಿಕಿ ಬೆರ್ಟೆನ್ಸ್ ಕ್ರೊಯೇಶಿಯದ ಡೊನ್ನಾ ವೆಕಿಕ್‌ರನ್ನು ಸೋಲಿಸಿ ಡಬ್ಲುಟಿಎ ಸೈಂಟ್ ಪೀಟರ್ಸ್ ಬರ್ಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಇಲ್ಲಿ ರವಿವಾರ ರಾತ್ರಿ ಒಂದು ಗಂಟೆ, 43 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ 27ರ ಹರೆಯದ ಬೆರ್ಟೆನ್ಸ್ 30ನೇ ರ್ಯಾಂಕಿನ ಆಟಗಾರ್ತಿ ವೆಕಿಕ್‌ರನ್ನು 7-6(7/2), 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ನಾಲ್ಕು ಬಾರಿಯ ಮುಖಾಮುಖಿಯಲ್ಲಿ ಮೊದಲ ಬಾರಿ ವೆಕಿಕ್ ವಿರುದ್ಧ್ದ ಜಯ ದಾಖಲಿಸಿದರು.