×
Ad

ನಾಯಕ ದಿನೇಶ್ ಚಾಂಡಿಮಾಲ್‌ ರನ್ನು ಕೆಬಿಟ್ಟ ಶ್ರೀಲಂಕಾ

Update: 2019-02-05 23:49 IST

ಕೊಲಂಬೊ, ಫೆ.5: ನಾಯಕ ದಿನೇಶ್ ಚಾಂಡಿಮಾಲ್‌ರನ್ನು ಮುಂಬರುವ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಫಾರ್ಮ್‌ನ್ನು ಮರಳಿ ಪಡೆಯಲು ದೇಶೀಯ ಕ್ರಿಕೆಟ್‌ನಲ್ಲಿ ಆಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಚಾಂಡಿಮಾಲ್‌ಗೆ ಸೂಚನೆ ನೀಡಿದೆ. ಫೆ.13 ರಿಂದ ಆರಂಭವಾಗಲಿರುವ ದ.ಆಫ್ರಿಕ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಯಾಗಿರುವ 17 ಸದಸ್ಯರಿರುವ ತಂಡವನ್ನು ಆರಂಭಿಕ ಆಟಗಾರ ಡಿಮುತ್ ಕರುಣರತ್ನೆ ಹಂಗಾಮಿ ನಾಯಕನಾಗಿ ಮುನ್ನಡೆಸಲಿದ್ದಾರೆ. ಚಾಂಡಿಮಾಲ್ ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ದ 2 ಟೆಸ್ಟ್ ಪಂದ್ಯಗಳಲ್ಲಿ 5, 0, 15 ಹಾಗೂ 4 ರನ್ ಗಳಿಸಿದ್ದರು. ತಂಡದಲ್ಲಿ ಮೂರು ಹೊಸಮುಖಗಳಾದ ದಾಂಡಿಗ ಒಶಾಡಾ ಫೆರ್ನಾಂಡೊ, ವೇಗದ ಬೌಲರ್ ಮುಹಮ್ಮದ್ ಶಿರಾಝ್ ಹಾಗೂ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್‌ಡೇನಿಯಾ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News