ವಿದರ್ಭಕ್ಕೆ ಸತತ ಎರಡನೇ ಬಾರಿ ರಣಜಿ ಕಿರೀಟ

Update: 2019-02-07 07:20 GMT

ನಾಗ್ಪುರ, ಫೆ.7: ವಿದರ್ಭ ತಂಡ ಸತತ ಎರಡನೇ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಇಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ನಲ್ಲಿ ಸೌರಾಷ್ಟ್ರ ವಿರುದ್ಧ 78 ರನ್ ಗಳ ಗೆಲುವು ದಾಖಲಿಸಿದ ವಿದರ್ಭ ತಂಡ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಎರಡನೇ ಇನಿಂಗ್ಸ್ ನಲ್ಲಿ ಗೆಲುವಿಗೆ 206 ರನ್ ಗಳ ಸವಾಲನ್ನು ಪಡೆದ ಸೌರಾಷ್ಟ್ರ ತಂಡ ಆದಿತ್ಯ ಸರ್ವಟೆ    (59ಕ್ಕೆ 6) ದಾಳಿಗೆ ತತ್ತರಿಸಿ 58.4 ಓವರ್ ಗಳಲ್ಲಿ 127 ರನ್ ಗಳಿಗೆ ಆಲೌಟಾಗಿದೆ.  

  ಸೌರಾಷ್ಟ್ರ ತಂಡ  ಬುಧವಾರ ದಿನದಾಟದ ಅಂತ್ಯಕ್ಕೆ 28 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 58 ರನ್‌ ಗಳಿಸಿತ್ತು. ಪಂದ್ಯದ ಅಂತಿಮ ದಿನವಾಗಿರುವ ಗುರುವಾರ ಈ ಮೊತ್ತಕ್ಕೆ 69 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಎರಡೂ ಇನಿಂಗ್ಸ್ ಗಳಲ್ಲಿ ಒಟ್ಟು 157ಕ್ಕೆ 11 ವಿಕೆಟ್ ಮತ್ತು 49 ರನ್ ಗಳಿಸಿರುವ  ವಿದರ್ಭ ತಂಡದ ಸ್ಪಿನ್ನರ್  ಆದಿತ್ಯ ಸರ್ವಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News