×
Ad

ಮೀರಾಬಾಯಿಗೆ ಚಿನ್ನ

Update: 2019-02-07 23:18 IST

ಹೊಸದಿಲ್ಲಿ, ಫೆ.7: ಸುದೀರ್ಘ ದಿನಗಳ ಬೆನ್ನುನೋವಿನಿಂದ ಹೊರಬಂದ ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಭಾರತದ ಮೀರಾಬಾಯಿ ಚಾನು ಥಾಯ್ಲೆಂಡ್‌ನ ಇಜಿಎಟಿ ಕಪ್‌ನಲ್ಲಿ ಗುರುವಾರ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಬೆಳ್ಳಿ ಪದಕ ಮಟ್ಟದ ಒಲಿಂಪಿಕ್ ಅರ್ಹತಾ ವಿಭಾಗದ ಸ್ಪರ್ಧೆಯಲ್ಲಿ 192 ಕೆ.ಜಿ. ಭಾರ ಎತ್ತುವ ಮೂಲಕ 48 ಕೆ.ಜಿ. ತೂಕ ವಿಭಾಗದಲ್ಲಿ ಪದಕ ಜಯಿಸಿದ್ದಾರೆ ಚಾನು. ಇಲ್ಲಿ ಅವರು ಗಳಿಸಿರುವ ಅಂಕಗಳು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಫೈನಲ್ ರ್ಯಾಂಕಿಂಗ್ಸ್‌ನಲ್ಲಿ ಮೇಲೆ ಬರಲು ಅನುಕೂಲವಾಗಲಿವೆ. 24 ವರ್ಷದ ಮಣಿಪುರದ ಚಾನು 82 ಕೆ.ಜಿ. ಸ್ನಾಚ್ ಹಾಗೂ 110 ಕೆ.ಜಿ. ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ ಭಾರ ಎತ್ತುವ ಮೂಲಕ ಪೋಡಿಯಮ್‌ನಲ್ಲಿ ಅಗ್ರಸ್ಥಾನಿಯಾದರು. ಗಾಯದ ಕಾರಣದಿಂದಾಗಿ ಅವರು ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್, ಚಿನ್ನದ ಪದಕ ಮಟ್ಟದ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 196 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದಿದ್ದ ಅವರು ಅದೇ ಕೊನೆಯ ಬಾರಿ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News