ಡ್ವೇನ್ ಬ್ರಾವೊ ಹೊಸ 'ಏಷ್ಯಾ' ಹಾಡಿನಲ್ಲಿ ಧೋನಿ, ಕೊಹ್ಲಿ!
ಜಮೈಕಾ, ಫೆ.10: ಚಾಂಪಿಯನ್ ಹಾಡಿನ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವಾನ್ ಬ್ರಾವೊ ಇದೀಗ "ಏಷ್ಯಾ" ಶೀರ್ಷಿಕೆಯ ಹೊಸ ಟ್ರ್ಯಾಕ್ ಬಿಡುಗಡೆ ಮಾಡಿದ್ದಾರೆ.
ಈ ಹಾಡನ್ನು ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರೀದಿ ಇಷ್ಟಪಟ್ಟಿದ್ದು, ಅವರು ಟ್ವಿಟರ್ ನಲ್ಲಿ ಅಭಿಮಾನಿಗಳ ಜತೆ ಇದನ್ನು ಷೇರ್ ಮಾಡಿದ್ದಾರೆ.
"ವೆಲ್ ಡಿಜೆ ಬ್ರಾವೊ; ಖಂಡಿತವಾಗಿಯೂ ಇದು ಚಾಂಪಿಯನ್ ಹಾಡಿನ ಸುಧಾರಿತ ರೂಪ. ನನ್ನನ್ನೂ ಈ ಸರಣಿಯಲ್ಲಿ ಸೇರಿಸಿದ್ದೀರಿ. ಹೊಸ ದೊಡ್ಡ ಸಂಖ್ಯೆಯನ್ನು ತಲುಪುವಲ್ಲಿ ಇದು ಯಶಸ್ವಿಯಾಗಲಿ. ಇದು ಜನಪ್ರಿಯವಾಗುತ್ತದೆ ಎಂಬ ನಿರೀಕ್ಷೆ ನನ್ನದು" ಎಂದು ಟ್ವೀಟ್ ಮಾಡಿದ್ದಾರೆ. ಭಾರತೀಯ ಅಭಿಮಾನಿಗಳಿಗೂ ಬ್ರಾವೊ ನಿರಾಸೆ ಮಾಡಿಲ್ಲ. ಭಾರತದ ಮಾಜಿ ಹಾಗೂ ಹಾಲಿ ನಾಯಕರಾದ ಎಂ.ಎಸ್,ಧೋನಿ ಹಾಗೂ ವಿರಾಟ್ ಕೊಹ್ಲಿಯವರನ್ನೂ ಸೇರಿಸಿದ್ದಾರೆ.
ಕ್ರಿಕೆಟ್ ಜತೆಗೆ ಬ್ರಾವೊ ಇದೀಗ ಹಾಡಿನಂಥ ತಮ್ಮ ವಿಶಿಷ್ಟ ಕೌಶಲದ ಮೂಲಕವೂ ವಿಶ್ವಖ್ಯಾತಿ ಪಡೆದಿದ್ದಾರೆ. 35 ವರ್ಷದ ಬ್ರಾವೊ 2017ರ ಐಪಿಎಲ್ ಆವೃತ್ತಿಯಲ್ಲಿ ಏಷ್ಯಾ ಹಾಡಿಗೆ ಸಿದ್ಧತೆ ಆರಂಭಿಸಿದ್ದರು.