ಮೂರನೇ ಟಿ20: ಭಾರತ ವಿರುದ್ಧ ನ್ಯೂಝಿಲೆಂಡ್ ಗೆ ಸರಣಿ ಜಯ

Update: 2019-02-10 11:00 GMT

ಹೊಸದಿಲ್ಲಿ, ಫೆ.10: ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್ ಭಾರತದ ವಿರುದ್ಧ 4 ರನ್ ಗಳ ಜಯ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಆರಂಭಿಕ ಆಟಗಾರ ಕಾಲಿನ್ ಮನ್ರೋ ಅವರ 72 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 212 ರನ್ ಗಳಿಸಿತ್ತು.

ಗೆಲ್ಲಲು ಕಠಿಣ ಗುರಿ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.

ದಿನೇಶ್ ಕಾರ್ತಿಕ್(ಔಟಾಗದೆ 33) ಹಾಗೂ ಕೃನಾಲ್ ಪಾಂಡ್ಯ(ಔಟಾಗದೆ 26)7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 63 ರನ್ ಸೇರಿಸಿ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದರು.

ವಿಜಯ ಶಂಕರ್(43), ನಾಯಕ ರೋಹಿತ್ ಶರ್ಮಾ(38) ಎರಡಂಕೆಯ ಸ್ಕೋರ್ ಗಳಿಸಿದರು. ನ್ಯೂಝಿಲೆಂಡ್‌ಗೆ 2-1 ಅಂತರದ ಸರಣಿ ಗೆಲುವು ತಂದುಕೊಟ್ಟ ಆತಿಥೇಯರ ನ್ಯೂಝಿಲೆಂಡ್ ಪರ ಡ್ಯಾರಿಲ್ ಮಿಚೆಲ್(2-27) ಹಾಗೂ ಮಿಚೆಲ್ ಸ್ಯಾಂಟ್ನರ್(2-32)ತಲಾ ಎರಡು ವಿಕೆಟ್ ಪಡೆದಿದ್ದಾರೆ. ಕಿವೀಸ್ ಆರಂಭಿಕ ಆಟಗಾರ ಮುನ್ರೊ ಪಂದ್ಯಶ್ರೇಷ್ಠ ಹಾಗೂ ಟಿಮ್ ಸೈಫರ್ಟ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News