ಜಪಾನ್‌ ನ ಉದಯೋನ್ಮುಖ ಈಜುಗಾರ್ತಿ ರಿಕಾಕೊಗೆ ಕ್ಯಾನ್ಸರ್

Update: 2019-02-12 18:14 GMT

ಟೋಕಿಯೊ, ಫೆ.12: ಕಳೆದ ವರ್ಷ ಏಶ್ಯನ್ ಗೇಮ್ಸ್ ನಲ್ಲಿ ಆರು ಪ್ರಶಸ್ತಿಗಳನ್ನು ಜಯಿಸಿದ್ದ, 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಸ್ಪರ್ಧಿಯಾಗಿರುವ ಜಪಾನ್‌ನ ಉದಯೋನ್ಮುಖ ಈಜುಗಾರ್ತಿ ರಿಕಾಕೊ ಇಕೀ ಲ್ಯುಕೇಮಿಯಾ(ರಕ್ತ ಕ್ಯಾನ್ಸರ್) ದಿಂದ ಬಳಲುತ್ತಿದ್ದಾರೆ.

18ರ ಹರೆಯದ ರಿಕಾಕೊ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ನೀಡಿದ್ದ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಜಪಾನ್‌ನ ವರ್ಷದ ಈಜುಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. ಱಱನನಗೆ ಅನಾರೋಗ್ಯದ ಭಾವನೆ ಉಂಟಾಯಿತು. ಹಾಗಾಗಿ ಆಸ್ಟ್ರೇಲಿಯದಿಂದ ಜಪಾನ್‌ಗೆ ವಾಪಸಾಗಿದ್ದೆ. ಪರೀಕ್ಷೆಗೆ ಒಳಗಾದಾಗ ಲ್ಯುಕೆಮಿಯಾ ಇರುವುದು ಪತ್ತೆಯಾಗಿದೆ. ಇದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಾನೀಗ ಗೊಂದಲದ ಪರಿಸ್ಥಿತಿಯಲ್ಲಿದ್ದೇನೆ. ಚಿಕಿತ್ಸೆಯ ಮೂಲಕ ಈ ಕಾಯಿಲೆಯನ್ನು ಗುಣಪಡಿಸಬಹುದುೞೞಎಂದು ರಿಕಾಕೊ ಟ್ವೀಟ್ ಮಾಡಿದ್ದಾರೆ.

ರಿಕಾಕೊ ಕಳೆದ ವರ್ಷ 100 ಮೀ. ಬಟರ್‌ಫ್ಲೈನಲ್ಲಿ ಅತ್ಯಂತ ವೇಗವಾಗಿ ಈಜಿದ ವಿಶ್ವದ ಸ್ವಿಮ್ಮರ್ ಎನಿಸಿಕೊಂಡಿದ್ದರು. 50 ಮೀ. ಬಟರ್‌ಫ್ಲೈನಲ್ಲಿ ಎರಡನೇ ಅತ್ಯಂತ ವೇಗವಾಗಿ ಈಜಿದ್ದರು. ಚಿಕಿತ್ಸೆಯತ್ತ ಗಮನ ನೀಡಬೇಕಾದ ಕಾರಣ ಜಪಾನ್ ಸ್ವಿಮ್ಮಿಂಗ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News