ಇಂಗ್ಲೆಂಡ್ ಮಾಜಿ ಗೋಲ್ ಕೀಪರ್ ಬ್ಯಾಂಕ್ಸ್ ನಿಧನ

Update: 2019-02-12 18:15 GMT

ಸ್ಟೋಕ್(ಇಂಗ್ಲೆಂಡ್), ಫೆ.12: ಇಂಗ್ಲೆಂಡ್ ತಂಡ 1966ರಲ್ಲಿ ವಿಶ್ವಕಪ್ ಗೆದ್ದಾಗ ಗೋಲ್‌ಕೀಪರ್ ಆಗಿದ್ದ ಗಾರ್ಡನ್ ಬ್ಯಾಂಕ್ಸ್ ನಿಧನರಾಗಿದ್ದು, ಅವರಿಗೆ 81 ವರ್ಷ ವಯಸ್ಸಾಗಿತ್ತು ಎಂದು ಸ್ಟೋಕ್ ಸಿಟಿ ಕ್ಲಬ್ ಮಂಗಳವಾರ ತಿಳಿಸಿದೆ.

1963 ಹಾಗೂ 1972ರ ಮಧ್ಯೆ ಬ್ಯಾಂಕ್ಸ್ 73 ಪಂದ್ಯಗಳನ್ನು ಆಡಿದ್ದರು. ಸ್ಟೋಕ್ಸ್ ಸಿಟಿ ಫುಟ್ಬಾಲ್ ಕ್ಲಬ್ ಪರ ಸುಮಾರು 200 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಕಾರು ಅಪಘಾತದಲ್ಲಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಬಳಿಕ ವೃತ್ತಿಜೀವನ ಕೊನೆಗೊಳಿಸಿದ್ದರು.

ಬ್ಯಾಂಕ್ಸ್ ಫುಟ್ಬಾಲ್‌ನ ಓರ್ವ ಶ್ರೇಷ್ಠ ಗೋಲ್‌ಕೀಪರ್ ಎಂದು ಪರಿಗಣಿಸಲ್ಪಟ್ಟಿದ್ದು 1970ರ ವಿಶ್ವಕಪ್‌ನಲ್ಲಿ ಬ್ರೆಝಿಲ್ ದಿಗ್ಗಜ ಆಟಗಾರ ಪೀಲೆ ಬಾರಿಸಿದ ಚೆಂಡನ್ನು ಮೇಲಕ್ಕೆ ಜಿಗಿದು ತಡೆದಿದ್ದರು. ಇದು ಅವರ ಸ್ಮರಣೀಯ ಪ್ರದರ್ಶನವಾಗಿದೆ. ಬ್ಯಾಂಕ್ಸ್ 1958ರಲ್ಲಿ ಚೆಸ್ಟರ್‌ಫೀಲ್ಡ್ ಪರ ಆಡುವ ಮೂಲಕ ತನ್ನ ವೃತ್ತಿಜೀವನ ಆರಂಭಿಸಿದ್ದರು. ಮರುವರ್ಷ ಲೈಸೆಸ್ಟರ್‌ಶೈರ್ ಸಿಟಿಗೆ ವರ್ಗಾವಣೆಯಾಗಿದ್ದರು. 1963ರಲ್ಲಿ ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯವಾಡಿದ್ದ ಅವರು ನಾಲ್ಕು ವರ್ಷಗಳ ಬಳಿಕ ಸ್ಟೋಕ್ ಕ್ಲಬ್‌ನ್ನು ಸೇರ್ಪಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News